ಧಾರವಾಡ: ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸುವ ಸಲುವಾಗಿ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸಿದ ಫೋಕ್ಸ್‌ವ್ಯಾಗನ್ ಶೋರೂಮ್‌ಗೆ ಗ್ರಾಹಕ ನ್ಯಾಯಾಲಯ ಭರ್ಜರಿ ದಂಡ ವಿಧಿಸಿದೆ.
ದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಶ್ರೀ ಈಶಪ್ಪ ಕೆ. ಭೂತೆ ಮತ್ತು ಸದಸ್ಯರಾದ ವಿಶಾಲಾಕ್ಷಿ ಎ. ಬೋಳಶೆಟ್ಟಿ ಅವರಿದ್ದ ನ್ಯಾಯಪೀಠ ಈ ದಂಡ ವಿಧಿಸಿ ಆದೇಶ ಹೊರಡಿಸಿದೆ.
HSRP ನಂಬರ್ ಪ್ಲೇಟ್ ಅಳವಡಿಸುವ ಸಲುವಾಗಿ ಗ್ರಾಹಕರಿಂದ ₹200 ಶುಲ್ಕ ಪಡೆದುಕೊಂಡಿದ್ದರು. ಇದರಿಂದ ಬಾಧಿತರಾಧ ಗ್ರಾಹಕ/ದೂರುದಾರರು ಧಾರವಾಡದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿದ್ದರು.
ಈ ದೂರನ್ನು ವಿಚಾರಣೆಗೆ ಕೈಗೆತ್ತಿಕೊಂಡ ಆಯೋಗವು ದೂರನ್ನು ಪುರಸ್ಕರಿಸಿ ಆದೇಶ ಹೊರಡಿಸಿತು. ಗ್ರಾಹಕ/ ದೂರುದಾರರಿಗೆ ₹ 25,000 ಪರಿಹಾರವನ್ನು ನೀಡಿತು. ಜೊತೆಗೆ₹10,000 ಮೊಕದ್ದಮೆ ವೆಚ್ಚಗಳು ಮತ್ತು ನಂಬರ್ ಪ್ಲೇಟ್‌ಗೆ ಪಡೆಯಲಾಗಿದ್ದ ₹ 200 ಶೇಕಡಾ 10ರ ದಂಡನಾ ಬಡ್ಡಿ ಜೊತೆಗೆ ಮರುಪಾವತಿ ಮಾಡಬೇಕು ಎಂದು ಆದೇಶದಲ್ಲಿ ನಿರ್ದೇಶಿಸಲಾಗಿದೆ.
ಆದೇಶ ಹೊರಡಿಸಿದ 30 ದಿನದೊಳಗೆ ಪಾವತಿ ಮಾಡುವಂತೆ ಗ್ರಾಹಕರ ಆಯೋಗ ಶೋ ರೂಮ್‌ಗೆ ನಿರ್ದೇಶನ ನೀಡಿದೆ.