Select Your Language

Notifications

webdunia
webdunia
webdunia
webdunia

ಎಚ್‌ಡಿಕೆ ವಿರುದ್ಧ ಭೂಮಿ ಒತ್ತುವರಿ ಆರೋಪ: ಕಂದಾಯ ಅಧಿಕಾರಿಗಳಿಂದ ಸರ್ವೇ

Central Minister HD Kumaraswamy, Allegation of land encroachment, Karnataka High Court

Sampriya

ರಾಮನಗರ , ಸೋಮವಾರ, 17 ಫೆಬ್ರವರಿ 2025 (19:05 IST)
ರಾಮನಗರ: ಕೇಂದ್ರ ಸಚಿವ ಎಚ್‌​​ಡಿ ಕುಮಾರಸ್ವಾಮಿ ವಿರುದ್ಧ ತಾಲೂಕಿನ ಬಿಡದಿ ಹೋಬಳಿ ವ್ಯಾಪ್ತಿಯ ಕೇತಗಾನಹಳ್ಳಿಯಲ್ಲಿ ಭೂಮಿ ಒತ್ತುವರಿ ಆರೋಪ ವಿಚಾರವಾಗಿ ಈಚೆಗೆ ಹೈಕೋರ್ಟ್ ತರಾಟೆ ತೆಗೆದುಕೊಂಡ ಬೆನ್ನಲ್ಲೇ ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೆ ಕಾರ್ಯ ಮಾಡಲಾಗಿದೆ.

14 ಎಕರೆ ಭೂಮಿ ಸರ್ಕಾರಿ ಜಮೀನನ್ನ ಒತ್ತುವರಿ ಮಾಡಿದ್ದಾರೆಂದು ಸಾಮಾಜಿಕ ಹೋರಾಟಗಾರರು ದೂರು ನೀಡಿದ್ದರು. ವರದಿ ನೀಡಲು ವಿಳಂಬ ಹಿನ್ನಲೆ ಕಂದಾಯ ಇಲಾಖೆ ಆಯುಕ್ತರಿಗೆ ಶೀಘ್ರ ವರದಿ ನೀಡುವಂತೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ಹೈಕೋರ್ಟ್ ತಾಕೀತು ಮಾಡಿದ ಬೆನ್ನಲ್ಲೇ ಇದೀಗ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯ ಮಾಡಿದ್ದಾರೆ. ಇನ್ನು ಹೆಚ್​ಡಿ ಕುಮಾರಸ್ವಾಮಿ ಭೂ ಒತ್ತುವರಿ ಬಗ್ಗೆ ತನಿಖೆಗೆ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು.

ಕೇತಗಾನಹಳ್ಳಿಯಲ್ಲಿ ರೆವಿನ್ಯೂ ಇನ್ಸ್​ಪೆಕ್ಟರ್ ಪ್ರಕಾಶ್ ಮತ್ತು ವಿಎ ವಿಶಾಲಾಕ್ಷಿ ನೇತೃತ್ವದಲ್ಲಿ 35ಕ್ಕೂ ಹೆಚ್ಚು ಸರ್ವೆ ನಂಬರ್​ಗಳ ಜಮೀನು ಪರಿಶೀಲನೆ ಮಾಡಲಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂಬೆಳ್ಳಗ್ಗೆ ಭಾರೀ ಸದ್ದಿಗೆ ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ ಜನತೆ, ಭೂಕಂಪನಕ್ಕೆ ಮನೆಯಿಂದ ಹೊರಬಂದ ಮಂದಿ