ಬೆಂಗಳೂರು: ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧ ದೂರು ನೀಡಿದ ಮಹಿಳೆಯರ ಜೊತೆಗಿನ ವಿಡಿಯೋಗಳನ್ನು ಮರಳಿಸುವಂತೆ ಕೋರ್ಟ್ ಗೆ ಬೇಡಿಕೆಯಿಟ್ಟಿದ್ದಾರೆ.
ನನ್ನ ವಿರುದ್ಧ ದೂರು ನೀಡದ ಮಹಿಳೆಯರ ಜೊತೆಗಿನ ವಿಡಿಯೋವನ್ನು ಖಾಸಗಿ ವಿಡಿಯೋ ಎಂದು ಪರಿಗಣಿಸಿ ಮರಳಿಸಿ ಎಂದು ಮನವಿ ಮಾಡಿದ್ದಾರೆ. ಆದರೆ ಪ್ರಜ್ವಲ್ ಮನವಿಗೆ ಹೈಕೋರ್ಟ್ ಛೀಮಾರಿ ಹಾಕಿದೆ.
ದಾಖಲು ಮಾಡಿದವರ ವಿಡಿಯೋ ಮಾತ್ರ ನೀಡಿ, ಇತರೆ ಸಂತ್ರಸ್ತೆಯ ಜೊತೆಗಿನ ವಿಡಿಯೋ ನೀಡಬೇಡಿ ಎಂದು ಹೈಕೋರ್ಟ್ ಆದೇಶ ನೀಡಿದೆ. ಲೈಂಗಿಕ ಪ್ರಕರಣದಲ್ಲಿ ಎಸ್ಐಟಿ ಹಲವು ವಿಡಿಯೋಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಇದರಲ್ಲಿ ಪ್ರಜ್ವಲ್ ರೇವಣ್ಣ ರಾಸಲೀಲೆಯ ತುಣುಕುಗಳಿವೆ. ಈ ಎಲ್ಲಾ ವಿಡಿಯೋಗಳು ಅಶ್ಲೀಲವಾಗಿದೆ. ಇತರೆ ಸಂತ್ರಸ್ತೆಯರ ಖಾಸಗಿತನ ಗೌರವಿಸುವುದು ಕೋರ್ಟ್ ಕರ್ತವ್ಯವಾಗಿದೆ. ಪ್ರಜ್ವಲ್ ಎಂಬ ಕಾರಣಕ್ಕೆ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾ. ನಾಗಪ್ರಸನ್ನ ಖಡಾ ಖಂಡಿತವಾಗಿ ಹೇಳಿದ್ದಾರೆ.