Select Your Language

Notifications

webdunia
webdunia
webdunia
webdunia

ಒಂದು ದಿನದ ಮಟ್ಟಿಗೆ ಬಾಯ್ ಫ್ರೆಂಡ್ ಆಗಲು ಇಷ್ಟು ಬಾಡಿಗೆ: ಗಮನ ಸೆಳೆಯುತ್ತಿದೆ ಈ ಪೋಸ್ಟ್

Valentine poster

Krishnaveni K

ಬೆಂಗಳೂರು , ಮಂಗಳವಾರ, 11 ಫೆಬ್ರವರಿ 2025 (13:07 IST)
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಈ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುವಂತಿದೆ. ಒಂದು ದಿನದ ಮಟ್ಟಿಗೆ ಬಾಯ್ ಫ್ರೆಂಡ್ ಬಾಡಿಗೆಗೆ ಪಡೆಯಬಹುದಂತೆ. ಈ ಪೋಸ್ಟ್ ಕುರಿತ ವಿವರ ಇಲ್ಲಿದೆ ನೋಡಿ.

ಶಂಕರ್ ಜಿಎಸ್ ಎಂಬವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಇಂತಹದ್ದೊಂದು ಫೋಟೋವನ್ನು ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ವ್ಯಾಲೆಂಟೈನ್ಸ್ ಡೇ ನಿಮಿತ್ತ ಆಫರ್. ಬಾಯ್ ಫ್ರೆಂಡ್ ಬಾಡಿಗೆಗೆ ಪಡೆಯಿರಿ. ಒಂದು ದಿನಕ್ಕೆ ಕೇವಲ 389 ರೂ.ಗಳು. ವಿವರಕ್ಕೆ ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಎಂದು ಜಾಹೀರಾತು ಫಲಕವನ್ನು ಅಂಟಿಸಲಾಗಿದೆ.

ಇನ್ನೇನು ವ್ಯಾಲೆಂಟೈನ್ಸ್ ಡೇ ಬಂದಿದ್ದು, ಸಿಂಗಲ್ ಆಗಿರುವವರ ಗೋಳು ಕೇಳುವ ಹಾಗಿಲ್ಲ. ಬೇರೆಯವರ ಮುಂದೆ ಮರ್ಯಾದೆ ಪ್ರಶ್ನೆ ಎಂಬ ಕಾರಣಕ್ಕೆ ಪಾರ್ಟಿಗಳಿಗೆ ಹೋಗಲು ಬಾಯ್ ಫ್ರೆಂಡ್ ಬೇಕು ಎಂದರೆ ಈ ರೀತಿ ಒಂದು ದಿನದ ಮಟ್ಟಿಗೆ ಬಾಯ್ ಫ್ರೆಂಡ್ ನ್ನೂ ಬಾಡಿಗೆಗೆ ಪಡೆಯಬಹುದಂತೆ.

ಬೆಂಗಳೂರಿನ ಬನಶಂಕರಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಇಂತಹದ್ದೊಂದು ಪೋಸ್ಟರ್ ಲಗತ್ತಿಸಲಾಗಿದೆ ಎಂದು ಶಂಕರ್ ಎಂಬವರು ಫೇಸ್ ಬುಕ್ ನಲ್ಲಿ ಫೋಟೋ ಸಮೇತ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಏರ್ ಶೋ ಇಫೆಕ್ಟ್: ಈ ರಸ್ತೆಯಲ್ಲಿ 4 ಕಿಮೀ ಟ್ರಾಫಿಕ್ ಜಾಮ್ (video)