ಬೆಂಗಳೂರು: ನಮ್ಮ ಮೆಟ್ರೊ ಟಿಕೆಟ್ ದರ ಏಕಾಏಕಿ ದುಪ್ಪಟ್ಟು ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮೆಟ್ರೊ ಟಿಕೆಟ್ ದರವೂ ಆಪ್ ಆಧಾರಿತ ಕ್ಯಾಬ್ ದರವೂ ಈಗ ಹೆಚ್ಚು ಕಡಿಮೆ ಸರಿಸಮವಾಗಿದೆ.
ಫೆಬ್ರವರಿ 9 ರಿಂದ ಮೆಟ್ರೊ ಟಿಕೆಟ್ ದರ 2 ರಿಂದ 2.5 ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಈಗ ಜನ ಮೆಟ್ರೊ ಹತ್ತಲೂ ಹಿಂಜರಿಯುವಂತಾಗಿದೆ. ಪ್ರತಿನಿತ್ಯ ಸಂಚರಿಸುವವರು ಪಾಸ್ ಮಾಡಿಸಿಕೊಳ್ಳಬಹುದು. ಆದರೆ ಅಪರೂಪಕ್ಕೆ ಮೆಟ್ರೊ ಹತ್ತುರವವರಿಗೆ ಪಾಸ್ ಮಾಡಿದರೂ ವೇಸ್ಟ್. ಹೀಗಾಗಿ ಟಿಕೆಟ್ ದರ ಹೆಚ್ಚಳ ಬಿಸಿ ತುಪ್ಪವಾಗಿದೆ.
ಮೆಟ್ರೊದಲ್ಲಿ ಈಗ 2-4 ಕಿ.ಮೀ. ದೂರ ಸಂಚರಿಸಬೇಕಾದರೆ ಮಿನಿಮಮ್ 30 ರೂ. ನೀಡಬೇಕು. ಆಪ್ ಆಧಾರಿತ ಕ್ಯಾಬ್ ಗಳಲ್ಲೂ ಹೆಚ್ಚು ಕಡಿಮೆ ಇಷ್ಟೇ ದರವಿದೆ. ಒಂದು ವೇಳೆ ಇಬ್ಬರು 2 ಕಿ.ಮೀ. ಜೊತೆಯಾಗಿ ಹೋಗಬೇಕಾದರೆ ಮೆಟ್ರೊಗಿಂತ ಆಟೋವೇ ಅಗ್ಗವಾಗಿರುತ್ತದೆ.
ಹೀಗಿರುವಾಗ ನಮಗೆ ಮೆಟ್ರೋ ಯಾಕೆ ಬೇಕು ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆ, ಪರಿಸರ ಸ್ನೇಹಿ ಎಂಬ ಕಾರಣಕ್ಕೆ ಮೆಟ್ರೊವನ್ನು ನಗರದಲ್ಲಿ ಪರಿಚಯಿಸಲಾಗಿತ್ತು. ಆದರೆ ಈಗ ಮೆಟ್ರೊ ಇದ್ದೂ ಉಪಯೋಗವಿಲ್ಲದಂತಾಗಿದೆ.