ಬೆಂಗಳೂರು: ರಾಜ್ಯ ರಾಜಧಾನಿ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಶಾಕ್ ಕೊಟ್ಟಿದೆ. ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾಗಿದ್ದು ನೂತನ ದರ ಪಟ್ಟಿ ಹೀಗಿದೆ ನೋಡಿ.
ಕಳೆದ ಕೆಲವು ದಿನಗಳಿಂದ ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಆದರೆ ಬಿಎಂಆರ್ ಸಿಎಲ್ ಕೋರಿಕೆಯನ್ನು ಕೇಂದ್ರ ತಿರಸ್ಕರಿಸಿತ್ತು ಎಂಬ ಕಾರಣಕ್ಕೆ ಟಿಕೆಟ್ ದರ ಹೆಚ್ಚಳ ಕೆಲವು ಸಮಯದ ಮಟ್ಟಿಗೆ ಮುಂದೂಡಲಾಗಿದೆ ಎಂಬ ಮಾತು ಕೇಳಿಬರುತ್ತಿತ್ತು.
ಆದರೆ ಈಗ ಕಿ.ಮೀ. ಗೆ ಅನುಗುಣವಾಗಿ ಸದ್ದಿಲ್ಲದೇ ಟಿಕೆಟ್ ದರ ಏರಿಕೆ ಮಾಡಲಾಗಿದೆ. ಅದರಂತೆ ನೂತನ ದರ ಇಂದಿನಿಂದಲೇ ಜಾರಿಗೆ ಬರಲಿದ್ದು ಹೊಸ ದರ ಪಟ್ಟಿ ಹೀಗಿದೆ.
ಕಿ.ಮೀ. ದರ
0-2 10 ರೂ.
2-4 20. ರೂ.
4-6 30 ರೂ.
6-8 40 ರೂ.
8-10 50 ರೂ.
10-15 60 ರೂ.
15-20 70 ರೂ.
20-25 80 ರೂ.
25-30 90 ರೂ.
ಇನ್ನು ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ 5% ರಿಯಾಯಿತಿ ಸಿಗಲಿದೆ. ಇದರಿಂದ ನಿಗದಿತವಾಗಿ ಮೆಟ್ರೋ ಬಳಸುವ ಪ್ರಯಾಣಿಕರಿಗೆ ಕೊಂಚ ಅನುಕೂಲವಾಗಲಿದೆ. ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಭಾನುವಾರಗಳಂದು ಮತ್ತು ರಿಪಬ್ಲಿಕ್ ಡೇ, ಸ್ವಾತಂತ್ರ್ಯ ದಿಚಾರಣೆಯಂತಹ ರಜಾ ದಿನಗಳಲ್ಲಿ 10% ರಿಯಾಯಿತಿ ದೊರೆಯುವುದು. ಸ್ಮಾರ್ಟ್ ಕಾರ್ಡ್ ದಾರರು 90 ರೂ. ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಂಡಿರಬೇಕು.