Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲು ಇದುವೇ ಕಾರಣ

PM Modi

Krishnaveni K

ನವದೆಹಲಿ , ಭಾನುವಾರ, 9 ಫೆಬ್ರವರಿ 2025 (08:58 IST)
Photo Credit: X
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಬಿಜೆಪಿ ಅಭೂತಪೂರ್ವ ಗೆಲುವಿಗೆ ಕಾರಣವೇನು ಎಂದು ನೋಡಿದರೆ ಎರಡು ಕಾರಣಗಳು ಪ್ರಮುಖವಾಗಿ ಕಂಡುಬರುತ್ತಿದೆ.

ದೆಹಲಿ ಗದ್ದುಗೆಗೇರುತ್ತಿರುವ ಬಿಜೆಪಿಗೆ ಮೊದಲನೆಯದಾಗಿ ಪ್ಲಸ್ ಪಾಯಿಂಟ್ ಆಗಿದ್ದು ಕೇಜ್ರಿವಾಲ್ ಮೇಲಿನ ಭ್ರಷ್ಟಾಚಾರ ಆರೋಪಗಳು. ದೆಹಲಿ ಮದ್ಯ ನೀತಿ ಅಕ್ರಮದಲ್ಲಿ ಜೈಲು ಸೇರಿದ್ದ ಕೇಜ್ರಿವಾಲ್ ಮೇಲೆ ಜನರಿಗೆ ಅಪನಂಬಿಕೆ ಶುರುವಾಗಿತ್ತು. ಸರಳ, ಸ್ವಚ್ಛ ಆಡಳಿತದ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಅಧಿಕಾರಕ್ಕೇರಿದ್ದ ಆಪ್ ಕೂಡಾ ಇತರೆ ಪಕ್ಷಗಳಂತೆಯೇ ಎಂದು ಬಿಂಬಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು.

ಕೇಜ್ರಿವಾಲ್ ಗೆ ಖಲಿಸ್ತಾನಿಗಳ ಜೊತೆಗಿನ ನಂಟು, ಐಷಾರಾಮಿ ಬಂಗಲೆ ಆರೋಪಗಳು ಅವರ ಮೇಲೆ ಜನರಿಗೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿತ್ತು. ಅಲ್ಲದೆ ತಾವು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋಗಿದ್ದರೂ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡದ ಅವರ ಮೇಲೆ ಜನರಿಗೆ ಆಕ್ರೋಶವಿತ್ತು.

ಇನ್ನೊಂದು ಪ್ರಮುಖ ಕಾರಣವೆಂದರೆ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಕೇಜ್ರಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಕಡಿದುಕೊಂಡಿದ್ದು, ಇದು ಎರಡೂ ಪಕ್ಷಕ್ಕೂ ಹೊಡೆತ ನೀಡಿತ್ತು. ಇದರ ಲಾಭ ಮಾಡಿಕೊಂಡಿದ್ದು ಬಿಜೆಪಿ. ಒಂದು ರೀತಿಯಲ್ಲಿ ಹೇಳುವುದಾದರೆ ತನಗೆ ಯಾರ ಸಹಾಯವೂ ಬೇಡ, ಏಕಾಂಗಿಯಾಗಿ ಬಿಜೆಪಿ ಸೋಲಿಸಬಲ್ಲೆವು ಎಂಬ ಕೇಜ್ರಿವಾಲ್ ಅತಿಯಾದ ಆತ್ಮವಿಶ್ವಾಸವೇ ಇಲ್ಲಿ ಅವರಿಗೆ ಮುಳುವಾಯಿತು ಎನ್ನಬಹುದು.
 

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಹಿಂದೆಂದೂ ಇರದ ಹವಾಮಾನ