Select Your Language

Notifications

webdunia
webdunia
webdunia
webdunia

ದೆಹಲಿ ಚುನಾವಣೆ: ಆಡಳಿತರೂಢ ಎಎಪಿಗೆ ಬಿಗ್‌ ಶಾಕ್‌, ಕೇಜ್ರಿವಾಲ್‌, ಸಿಸೋಡಿಯಾಗೆ ಸೋಲು

ದೆಹಲಿ ಚುನಾವಣೆ: ಆಡಳಿತರೂಢ ಎಎಪಿಗೆ ಬಿಗ್‌ ಶಾಕ್‌, ಕೇಜ್ರಿವಾಲ್‌, ಸಿಸೋಡಿಯಾಗೆ ಸೋಲು

Sampriya

ನವದೆಹಲಿ , ಶನಿವಾರ, 8 ಫೆಬ್ರವರಿ 2025 (12:49 IST)
Photo Courtesy X
ನವದೆಹಲಿ: ದೆಹಲಿ ವಿಧಾನಸಭೆಯ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ, ಎಎಪಿಯ ನಾಯಕ ಅರವಿಂದ ಕೇಜ್ರಿವಾಲ್‌ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಪರಾಭವಗೊಂಡಿದ್ದಾರೆ. ಈ ಮೂಲಕ ಎಎಪಿ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ.

ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಬಿಜೆಪಿ ಮುನ್ನಡೆಯಲ್ಲಿದೆ. ಬಹುಮತಕ್ಕೆ ಬೇಕಾದ ಸಂಖ್ಯೆಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಮುನ್ನಡೆಯ ಟ್ರೆಂಡ್‌ಗಳು ಬಿಜೆಪಿ ನಾಯಕರಲ್ಲಿ ಸಂಭ್ರಮ ಹೆಚ್ಚಿಸಿದೆ.

ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಎಪಿಯ ಪರಮೋಚ್ಛ ನಾಯಕ ಅರವಿಂದ ಕೇಜ್ರಿವಾಲ್‌ ಅವರು ಬಿಜೆಪಿಯ ಪರ್ವೇಶ್‌ ವರ್ಮಾ ವಿರುದ್ಧ ಪರಾಭವಗೊಂಡಿದ್ದಾರೆ. ಎದುರಾಳಿ ವಿರುದ್ಧ 3182 ಮತಗಳಿಂದ ಅರವಿಂದ್ ಕೇಜ್ರಿವಾಲ್‌ ಸೋತಿದ್ದಾರೆ

ಜಂಗ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಸಿಸೋಡಿಯಾ ಸೋಲು ಕಂಡಿದ್ದಾರೆ. ಈ ಕ್ಷೇತ್ರದದಲ್ಲಿ ಬಿಜೆಪಿಯ ತರವಿಂದರ್‌ ಮರ್ವ ಗೆಲುವು ಸಾಧಿಸಿದ್ದಾರೆ.  

ಸದ್ಯದ ಬೆಳವಣಿಗೆಯಂತೆ ಬಿಜೆಪಿ 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ, ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕಿದೆ. ಎಎಪಿ 23 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಕಾಂಗ್ರೆಸ್‌ ಒಂದೂ ಕ್ಷೇತ್ರದಲ್ಲೂ ಮುನ್ನಡೆ ಪಡೆಯಲು ವಿಫಲವಾಗಿದೆ.

ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗದ ಪ್ರಕಾರ, ಶೇಕಡಾ 60.54ರಷ್ಟು ಮತಗಳು ಚಲಾವಣೆಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪವಿತ್ರವಾದ ಯಮುನಾ ನದಿಗೆ ಕಳಂಕ ಹೆಚ್ಚಿದ್ದೆ ಆಪ್‌ ಸೋಲಿಗೆ ಕಾರಣ: ಅಶೋಕ್‌