Select Your Language

Notifications

webdunia
webdunia
webdunia
webdunia

ಪವಿತ್ರವಾದ ಯಮುನಾ ನದಿಗೆ ಕಳಂಕ ಹೆಚ್ಚಿದ್ದೆ ಆಪ್‌ ಸೋಲಿಗೆ ಕಾರಣ: ಅಶೋಕ್‌

ಪವಿತ್ರವಾದ ಯಮುನಾ ನದಿಗೆ ಕಳಂಕ ಹೆಚ್ಚಿದ್ದೆ ಆಪ್‌ ಸೋಲಿಗೆ ಕಾರಣ: ಅಶೋಕ್‌

Sampriya

ಬೆಂಗಳೂರು , ಶನಿವಾರ, 8 ಫೆಬ್ರವರಿ 2025 (12:37 IST)
ಬೆಂಗಳೂರು: ಎಎಪಿ ನಾಯಕರಾದ ಅರವಿಂದ್‌ ಕೇಜ್ರಿವಾಲ್‌ ಸಾವಿರಾರು ವರ್ಷ ಇತಿಹಾಸ ಹೊಂದಿರುವ ಯಮುನಾ ನದಿ ಮೇಲೆ ಕಳಂಕ ಹಚ್ಚಿದ್ದರು. ಅಲ್ಲದೇ ಜೈಲಿನಲ್ಲಿದ್ದುಕೊಂಡು 2 ತಿಂಗಳು ಆಡಳಿತ ಸ್ಥಗಿತಗೊಳಿಸಿದ್ದು ಬಿಜೆಪಿಗೆ ವರವಾಯಿತು ಎಂದು ವಿಪಕ್ಷ ನಾಯಕ ಆರ್.‌ ಅಶೋಕ್‌ ಹೇಳಿದ್ದಾರೆ.

ಸಾವಿರಾರು ವರ್ಷ ಇತಿಹಾಸ ಹೊಂದಿರುವ ಯಮುನಾ ನದಿ ಮೇಲೆ ಕೇಜ್ರಿವಾಲ್ ಕಳಂಕ ಹಾಕಿಬಿಟ್ರು. ಯಮುನಾ ನದಿ ಒಂದು ದಿನಕ್ಕೆ ಮಲಿನ ಆಗಿಲ್ಲ. ದೆಹಲಿ ಜನ ಪ್ರತಿದಿನ ಕುಡಿಯುತ್ತಿದ್ದ, ಗಂಗೆ ಅಂತ ಪೂಜೆ ಮಾಡ್ತಿದ್ದ ನೀರಿನ ಮೇಲೆಯೇ ಕಳಂಕ ತಂದರು. ಸ್ವಚ್ಛತೆ ಮಾಡುವ ಕೆಲಸ ನದಿಯದ್ದಲ್ಲ. ಕೇಜ್ರಿವಾಲ್‌ ಸರಿಯಾಗಿ ನಿರ್ವಹಣೆ ಮಾಡದೇ ನದಿ ಮೇಲೆ ಆಪಾದನೆ ಮಾಡಿಬಿಟ್ಟರು. ಇದೇ ಅವರ ಸೋಲಿಗೆ ಕಾರಣ ಎಂದು ನುಡಿದಿದ್ದಾರೆ.

ಯಾರೇ ಸಿಎಂ ಜೈಲಿಗೆ ಹೋದಾಗ ರಾಜೀನಾಮೆ ಕೊಟ್ಟು ಅವರದ್ದೇ ಪಕ್ಷದ ಮತ್ತೊಬ್ಬರಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕಿತ್ತು. ಆದರೆ ಇವರು 2 ತಿಂಗಳು ಜೈಲಿನಲ್ಲಿದ್ದುಕೊಂಡು ಆಡಳಿತ ಸ್ಥಗಿತಗೊಳಿಸಿದ್ದರು. ಅದರ ಶಾಪ ತಟ್ಟಿದೆ. ಜೊತೆಗೆ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟವೇ ಕೇಜ್ರಿವಾಲ್‌ ದೊಡ್ಡ ಕಳ್ಳ, ಭ್ರಷ್ಟಾಚಾರಿ ಎಂದು ಹೇಳಿದಾಗ ಜನರಿಗೆ ಅರ್ಥವಾಯ್ತು. ಜೊತೆಗೆ ಪ್ರಧಾನಿ ಮೋದಿ ಅವರ ಆಡಳಿತ ಬಿಜೆಪಿ ಗೆಲುವಿಗೆ ಕಾರಣ ಎಂದು ಅಶೋಕ್‌ ಹೇಳಿದ್ದಾರೆ.   

ಇಂಡಿಯಾ ಒಕ್ಕೂಟ ಒಡೆದು ಛಿದ್ರವಾಗಿದೆ. ಅಖಿಲೇಶ್‌ ಯಾದವ್‌, ಒಮರ್‌ ಅಬ್ದುಲ್ಲಾ ಎಲ್ಲರೂ ಕಾಂಗ್ರೆಸ್ಸನ್ನ ಟೀಕೆ ಮಾಡ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಸಹ ಈಗ ಪಾರ್ಟಿಮೆಂಟ್‌ ಪ್ರವೇಶಿಸಿದ್ದು, ವಂಶಪಾರಂಪರ್ಯ ರಾಜಕಾರಣ ಮುಂದುವರಿಸಿದ್ದಾರೆ. ಮೋದಿ ಜನಕ್ಕೋಸ್ಕರ ಕೆಲಸ ಮಾಡಿದರೆ ಸೋನಿಯಾ, ರಾಹುಲ್‌, ಪ್ರಿಯಾಂಕ ತಮ್ಮ ಕುಟುಂಬಕ್ಕಾಗಿ ಮಾಡ್ತಿದ್ದಾರೆ ಎನ್ನೋದು ಜಗಜ್ಜಾಹೀರಾಗಿದೆ. ಆದ್ದರಿಂದ ಜನ ಮೋದಿ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ದೆಹಲಿಯಲ್ಲಿ ಅಧಿಕಾರ ಕೊಟ್ಟಿದ್ದಾರೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಾಯಿಗೆ ಬದಂತೆ ಬಡಬಡಾಯಿಸುವುದು ಬಿಟ್ಟು ಖಾತೆ ನಿರ್ವಹಣೆ ಮಾಡಿ: ಚೆಲುವರಾಯಸ್ವಾಮಿಗೆ ಆರ್‌ ಅಶೋಕ್‌ ಕ್ಲಾಸ್‌