ಬೆಂಗಳೂರು: ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ನವೆಂಬರ್ 15ರ ಗಡುವನ್ನು ಬಿಬಿಎಂಪಿ ವಿಧಿಸಿದೆ.
ನವೆಂಬರ್ 15ರ ಒಳಗಡೆ ರಾಜಕಾಲುವೆ ತೆರವು ಕಾರ್ಯಾಚರಣೆ ಮಾಡುವಂತೆ ಬಿಬಿಎಂಪಿಯ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.
ಬಿಬಿಎಂಪಿಯ ದಾಖಲೆಗಳ ಪ್ರಕಾರ ಒಟ್ಟು 1,712 ರಾಜಕಾಲುವೆ ಒತ್ತುವರಿಯಾಗಿದೆ. ಈ ಪೈಕಿ ಬರೋಬ್ಬರಿ 1,348 ಪ್ರಕರಣಗಳು ಸರ್ವೇ ಹಾಗೂ ವಿಚಾರಣೆ ಹಂತದಲ್ಲಿವೆ.
ನ್ಯಾಯಾಲಯದಿಂದ ತೆರವಿಗೆ ಆದೇಶವಿರುವ 167 ಒತ್ತುವರಿಯನ್ನು ಸಹ ಬಿಬಿಎಂಪಿ ಇನ್ನೂ ತೆರವುಗೊಳಿಸಿಲ್ಲ. ತಹಶೀಲ್ದಾರ್ ಅವರು ಪರಾಮರ್ಶಿಸಿ ಕೂಡಲೇ ತೆರವಿಗೆ ಆದೇಶ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.