Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಆಸ್ತಿ ತೆರಿಗೆ ವಸೂಲಿಯಿಂದ ಆದಾಯ ಹೆಚ್ಚಿಸಲು ಪ್ಲಾನ್

bbmp

geetha

bangalore , ಬುಧವಾರ, 31 ಜನವರಿ 2024 (17:24 IST)
ಬೆಂಗಳೂರು-4 ಸಾವಿರ ಕೋಟಿ ಟಾರ್ಗೆಟ್ ರೀಚ್ ಮಾಡೋಕೆ BBMP ಹರಸಾಹಸಪಟ್ಟಿದೆ.ಸದ್ಯ ಸಿಲಿಕಾನ್ ಸಿಟಿಯಲ್ಲಿ ಹಲವಾರು ಮಂದಿ ತೆರಿಗೆ ಬಾಕಿ‌ಉಳಿಸಿದ್ದಾರೆ.ಸದ್ಯ 15 ರಿಂದ 20 ಸಾವಿರ ಜನರಿಗೆ ನೋಟಿಸ್ ಜಾರಿ ಮಾಡಿ ಟ್ಯಾಕ್ಸ್ ಪಾವತಿಸುವಂತೆ ಎಚ್ಚರಿಕೆ ನೀಡಿದೆ.ಇಲ್ಲಿವರೆಗೆ 3 ಸಾವಿರದ 273 ಕೋಟಿ ತೆರಿಗೆ ಬಿಬಿಎಂಪಿ  ಸಂಗ್ರಹಿಸಿದೆ .ಇದೀಗ 4 ಸಾವಿರ ಕೋಟಿ ಟಾರ್ಗೆಟ್ ರೀಚ್ ಮಾಡೋಕೆ ತಯಾರಿ ನಡೆಸಿದೆ.

ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶದಂತೆ ಆಸ್ತಿ ತೆರಿಗೆ ಬಾಕಿ ವಸೂಲಿಗೆ  ಪಾಲಿಕೆ ಮುಂದಾಗಿದೆ.ತೆರಿಗೆ ವಸೂಲಿಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗ್ತಿದೆ ಅನ್ನೋ ದೂರು ದಾಖಲಾಗಿದೆ.ಬಡ ಹಾಗೂ ಮಧ್ಯಮವರ್ಗದ ಜನರ ಟ್ಯಾಕ್ಸ್ ನಲ್ಲಿ ರಿಯಾಯಿತಿ ಕೊಡ್ತೀನಿ ಎಂದು  ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ರು.ಭರವಸೆ ನೀಡಿ ದಿನಗಳೇ ಉರುಳಿದ್ರು ಆ ಬಗ್ಗೆ ಸದ್ಯ ಅನ್ವಯವಾಗಿಲ್ಲ.ಆದ್ರೆ ಇದೀಗ ಬಜೆಟ್ ಮುಂಚೆ ಟಾರ್ಗೇಟ್ ರೀಚ್ ಮಾಡಲು ಬಿಬಿಎಂಪಿ ಹರಸಾಹಸಪಟ್ಟಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ-ಸಿಎಂ