ಮೈಸೂರು: ಸೋಷಿಯಲ್ ಮೀಡಿಯಾ ಪೋಸ್ಟ್ ವಿರುದ್ಧ ಸಿಡಿದೆದ್ದ ಮುಸ್ಲಿಂ ಯುವಕರು ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಅಷ್ಟಕ್ಕೂ ಪೋಸ್ಟ್ ನಲ್ಲಿ ಅಂತಹದ್ದೇನಿತ್ತು ಇಲ್ಲಿದೆ ವಿವರ.
ಮೈಸೂರು ಗಲಭೆಗೆ ಕಾರಣವಾದ ಪೋಸ್ಟ್ ಬಗ್ಗೆ ನಗರ ಪೊಲೀಸ್ ಆಯುಕ್ತರೇ ಮಾಹಿತಿ ನೀಡಿದ್ದಾರೆ. ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಸುರೇಶ್ ಎಂಬ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಧರ್ಮಗುರುಗಳ ಬಗ್ಗೆ ಅವಹೇಳನಕಾರೀ ಪೋಸ್ಟ್ ಮಾಡಿದ್ದ.
Photo Credit: Mysore Police Commissioner X
ಇದರಿಂದ ಕೆರಳಿದ ಮುಸ್ಲಿಂ ಯುವಕರು ಪೊಲೀಸ್ ಠಾಣೆಗೆ ನುಗ್ಗಿ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟಕ್ಕೂ ಆ ಪೋಸ್ಟ್ ನಲ್ಲಿ ಮುಸ್ಲಿಂ ಯುಕರನ್ನು ಕೆರಳಿಸುವಂತಹ ವಿಷಯ ಏನಿತ್ತು ಎಂಬುದನ್ನು ಸ್ವತಃ ಪೊಲೀಸರೇ ಬಿಚ್ಚಿಟ್ಟಿದ್ದಾರೆ.
ಅಖಿಲೇಶ್ ಯಾದವ್, ರಾಹುಲ್ ಗಾಂದಿ, ಅರವಿಂದ್ ಕೇಜ್ರಿವಾಲ್ ರ ಮುಖವನ್ನು ಧರ್ಮಗುರುವಿನಂತೆ ಚಿತ್ರಿಸಿ ತ್ರೀ ಈಡಿಯಟ್ಸ್ ಎಂದು ಆರೋಪಿ ಪೋಸ್ಟ್ ಮಾಡಿದ್ದ. ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಕಲ್ಲು ತೂರಾಟ ನಡೆಸಿದವರಿಗಾಗಿಯೂ ಹುಡುಕಾಟ ನಡೆದಿದೆ.