ಬೆಂಗಳೂರು: ಇನ್ನೇನು ಬೇಸಿಗೆಕಾಲ ಶುರುವಾಗಿಯೇ ಹೋಗಿದ್ದು, ಈ ಸಮಯದಲ್ಲಿ ಕಲ್ಲಂಗಡಿ ಹಣ್ಣು ಹೇರಳವಾಗಿ ಸಿಗುತ್ತದೆ. ಆದರೆ ಕಲ್ಲಂಗಡಿ ಹಣ್ಣು ಸೇವನೆಯಿಂದ ಗಂಟಲು ನೋವು ಬರುತ್ತಿದ್ದರೆ ಏನು ಮಾಡಬೇಕು ನೋಡಿ.
ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಹೇರಳವಾಗಿದ್ದು, ಹಸಿವು ಜೊತೆಗೆ ದಾಹವನ್ನೂ ನೀಗಿಸುತ್ತದೆ. ಜ್ಯೂಸ್ ಮಾಡಬೇಕೆಂದೇ ಇಲ್ಲ. ಹಾಗೆಯೇ ಸೇವನೆ ಮಾಡಿದರೂ ಜ್ಯೂಸ್ ನಷ್ಟೇ ರುಚಿ ಕೊಡುತ್ತದೆ.
ಆದರೆ ಕಲ್ಲಂಗಡಿ ಹಣ್ಣು ಸೇವನೆ ಮಾಡಿದರೆ ಕೆಲವರಿಗೆ ಗಂಟಲು ನೋವು ಬರುತ್ತದೆ. ಶೀತ ಪ್ರಕೃತಿಯವರಿಗೆ ಬೇಸಿಗೆಯಲ್ಲೂ ಕಲ್ಲಂಗಡಿ ಹಣ್ಣಿನ ಸೇವನೆ ಅನಾರೋಗ್ಯಕ್ಕೆ ಕಾರಣವಾಗುವುದು ಇದೆ. ಇದಕ್ಕೆ ಕೆಲವೊಂದು ಟಿಪ್ಸ್ ಪಾಲಿಸಿ.
-
ಒಮ್ಮೆಲೇ ಅತಿಯಾಗಿ ಸೇವನೆ ಮಾಡಬೇಡಿ.
-
ಕಲ್ಲಂಗಡಿ ಹಣ್ಣಿಗೆ ಸ್ವಲ್ಪ ಉಪ್ಪು, ಕಾಳು ಮೆಣಸು ಮಿಕ್ಸ್ ಮಾಡಿ ಸೇವನೆ ಮಾಡಿ
-
ಕಲ್ಲಂಗಡಿ ಹಣ್ಣು ಸೇವನೆ ಮಾಡಿದ ಮೇಲೆ ಗಂಟಲು ಕೆರೆತವಾಗುತ್ತಿದ್ದರೆ ಪದೇ ಪದೇ ಬಿಸಿ ನೀರು ಸೇವನೆ ಮಾಡಿ
-
ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವನೆ ಮಾಡಬೇಡಿ.
-
ಒಂದು ವೇಳೆ ಫ್ರಿಡ್ಜ್ ನಲ್ಲಿಟ್ಟರೆ ಹೊರಗೆ ತೆಗೆದಿಟ್ಟು ರೂಂ ಟೆಂಪರಚರ್ ಗೆ ಬಂದ ಮೇಲೆ ಸೇವನೆ ಮಾಡಿ.
-
ಒಂದು ಬಿಸಿ ಪಾನೀಯ ಅಥವಾ ಆಹಾರದ ಜೊತೆಗೇ ಕಲ್ಲಂಗಡಿ ಹಣ್ಣು ಸೇವಿಸಿದರೆ ಶೀತವಾಗದು.