Select Your Language

Notifications

webdunia
webdunia
webdunia
webdunia

ಮಲವಿಸರ್ಜನೆ ವೇಳೆ ಹೊಟ್ಟೆ ನೋಯುತ್ತಿದ್ದರೆ ನಿರ್ಲ್ಯಕ್ಷ ಬೇಡ

Stomach pain

Krishnaveni K

ಬೆಂಗಳೂರು , ಬುಧವಾರ, 5 ಫೆಬ್ರವರಿ 2025 (10:30 IST)
Photo Credit: Freepik
ಬೆಂಗಳೂರು: ನಮ್ಮ ದೇಹದ ಎಲ್ಲಾ ಚಟುವಟಿಕೆಗಳು ಸಮರ್ಪಕವಾಗಿ ನಡೆದರೆ ಮಾತ್ರ ನಾವು ಆರೋಗ್ಯವಂತರು ಎನ್ನಬಹುದು. ಮಲ ವಿಸರ್ಜನೆ ಮಾಡುವಾಗ ಹೊಟ್ಟೆ ನೋವಾಗುವ ಲಕ್ಷಣ ಕಂಡುಬಂದರೆ ಅದನ್ನು ಅಲಕ್ಷಿಸಬೇಡಿ.
 

ಸಾಮಾನ್ಯವಾಗಿ ಹಲವು ಕಾರಣಗಳಿಗೆ ಮಲ ವಿಸರ್ಜನೆ ಮಾಡುವಾಗ ಹೊಟ್ಟೆ ನೋವು ಬರಬಹುದು. ಅತಿಯಾದ ಖಾರದ ಆಹಾರ ವಸ್ತು ಸೇವನೆ ಮಾಡಿದರೆ, ನೀರು ಸರಿಯಾಗಿ ಸೇವಿಸದೇ ಇದ್ದರೆ ಮಲ ವಿಸರ್ಜನೆ ಮಾಡುವಾಗ ಹೊಟ್ಟೆ ನೋವಿನ ಸಮಸ್ಯೆ ಬರುತ್ತದೆ.

ಇವುಗಳ ಲಕ್ಷಣಗಳಿರಬಹುದು
ಮಲವಿಸರ್ಜನೆ ಮಾಡುವಾಗ ಹೊಟ್ಟೆ ನೋಯುತ್ತಿದ್ದರೆ ಅದು ಮಲಬದ್ಧತೆಯ ಲಕ್ಷಣವಾಗಿರಬಹುದು. ಕರುಳಿನಲ್ಲಿ ಉರಿಯೂತ, ಕರುಳಿನ ಸಮಸ್ಯೆಗಳಿದ್ದಾಗ ಮಲ ವಿಸರ್ಜನೆ ವೇಳೆ ಹೊಟ್ಟೆ ನೋವಾಗುವ ಸಾಧ್ಯತೆಯಿರುತ್ತದೆ. ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಈ ರೀತಿ ಆಗುವುದು ಸಹಜ. ಒತ್ತಡ, ಆಹಾರ ಜೀರ್ಣಕ್ರಿಯೆ ಸರಿಯಾಗಿ ಆಗದೇ ಇದ್ದಲ್ಲಿ ಹೊಟ್ಟೆ ನೋವು ಬರುತ್ತದೆ.

ಪರಿಣಾಮಗಳೇನು?
ಯಾವತ್ತೋ ಒಮ್ಮೆ ಹೀಗಾದಲ್ಲಿ ಅದು ಆಹಾರ ಜೀರ್ಣವಾಗದೇ ಇದ್ದಾಗ ಆಗಿದೆ ಎಂದು ಸುಮ್ಮನಾಗಬಹುದು. ಆದರೆ ಪದೇ ಪದೇ ಈ ರೀತಿ ಆಗುತ್ತಿದ್ದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲದೇ ಹೋದರೆ ಮುಂದೆ ಗಂಭೀರ ಸಮಸ್ಯೆ ಎದುರಿಸಬೇಕಾದೀತು.

ಪರಿಹಾರವೇನು?
ಅತಿಯಾದ ಹುಳಿ, ಖಾರದ ಆಹಾರ ವಸ್ತುಗಳನ್ನು ಆದಷ್ಟು ಅವಾಯ್ಡ್ ಮಾಡಿ. ಜೀರ್ಣಕ್ರಿಯೆಯಿಂದ ಹೊಟ್ಟೆ ನೋವಾಗುತ್ತಿದ್ದರೆ ಜೀರಿಗೆ ನೀರು ಸೇವನೆ ಮಾಡಿ. ಸಾಕಷ್ಟು ನೀರು ಅಥವಾ ನೀರಿನಂಶದ ಸೇವನೆ, ಫೈಬರ್ ಯುಕ್ತ ಆಹಾರ ಪದಾರ್ಥಗಳ ಸೇವನೆ ಮಾಡುತ್ತಿರಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ತಲೆ‌ಗೆ ಮಹೆಂದಿ ಹಚ್ಚುವುದರಿಂದ ಹಲವು ಪ್ರಯೋಜನ