Select Your Language

Notifications

webdunia
webdunia
webdunia
webdunia

ಪ್ರಕೃತಿಯ ವಿಸ್ಮಯ ನೋಡಿ, ಕಾಂಡ ಕತ್ತರಿಸಿದರೂ ಫಲ ಬಿಟ್ಟ ಬಾಳೆಗಿಡ: ವಿಡಿಯೋ

ಪ್ರಕೃತಿಯ ವಿಸ್ಮಯ ನೋಡಿ, ಕಾಂಡ ಕತ್ತರಿಸಿದರೂ ಫಲ ಬಿಟ್ಟ ಬಾಳೆಗಿಡ: ವಿಡಿಯೋ

Krishnaveni K

ಮಂಗಳೂರು , ಮಂಗಳವಾರ, 11 ಮಾರ್ಚ್ 2025 (12:05 IST)
ಸಾಮಾನ್ಯವಾಗಿ ಬಾಳೆಗಿಡ ಕಾಂಡ ಕತ್ತರಿಸಿದ ಮೇಲೆ ಫಲ ಬಿಡಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡಂಬೈಲು ಮುರಲೀಧರ ಶಾಸ್ತ್ರಿ ಎಂಬವರ ತೋಟದಲ್ಲಿ ಕಾಂಡ ಕತ್ತರಿಸಿದರೂ ಬಾಳೆ ಗಿಡ ಫಲ ಬಿಟ್ಟಿದೆ. ಕದಳಿ ಜಾತಿಯ ಬಾಳೆಗಿಡವನ್ನು ಗೊನೆಬಿಡುವ ಮೊದಲೇ ಕಾಂಡ ಕತ್ತರಿಸಲಾಗಿತ್ತು. ಹಾಗಿದ್ದರೂ ಅರ್ಧದಷ್ಟು ಭಾಗವನ್ನು ಹಾಗೆಯೇ ಬಿಡಲಾಗಿತ್ತು. ವಿಚಿತ್ರವೆಂದರೆ ಈಗ ಕಾಂಡದ ತಿರುಳಿನ ಭಾಗದಿಂದ ಗೊನೆ ಮೂಡಿದೆ. ಇಂತಹದ್ದೊಂದು ವಿಸ್ಮಯವಾಗುವುದು ಅಪರೂಪವೇ ಸರಿ. ಯಾರೋ ಫಿಕ್ಸ್ ಮಾಡಿಟ್ಟಂತೆ ಗೊನೆ ಮೂಡಿದೆ. ಸದ್ಯಕ್ಕೆ ಗೊನೆ ಆರೋಗ್ಯಕರವಾಗಿದ್ದು, ಇನ್ನೂ ಬೆಳವಣಿಗೆಯಾಗಬೇಕಿದೆ.
webdunia

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯೇಂದ್ರಗೂ ಏನೋ ದುಬೈ ನಂಟಿದ್ಯಂತಪ್ಪಾ... ಪ್ರಿಯಾಂಕ್ ಖರ್ಗೆ