Select Your Language

Notifications

webdunia
webdunia
webdunia
webdunia

ಕುಂಭಮೇಳ ಮುಗಿದ ಮೇಲೆ ಗಂಗಾನದಿ ತಟದಲ್ಲಿ ಚಿನ್ನ, ಹಣಕ್ಕಾಗಿ ಹುಡುಕಾಡುತ್ತಿರುವ ಯುವಕನ ವಿಡಿಯೋ ವೈರಲ್

Viral video

Krishnaveni K

ಪ್ರಯಾಗ್ ರಾಜ್ , ಸೋಮವಾರ, 10 ಮಾರ್ಚ್ 2025 (11:42 IST)
ಪ್ರಯಾಗ್ ರಾಜ್: ಕುಂಭಮೇಳ ಮುಗಿದ ಮೇಲೆ ಗಂಗಾ ನದಿ ತಟದಲ್ಲಿ ವ್ಯಕ್ತಿಯೊಬ್ಬ ಮೆಟಲ್ ಡಿಟೆಕ್ಟರ್ ಹಿಡಿದುಕೊಂಡು ಚಿನ್ನ, ಬೆಳ್ಳಿ, ನಾಣ್ಯಗಳಿಗಾಗಿ ಹುಡುಕಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜನವರಿಯಲ್ಲಿ ಆರಂಭವಾದ ಮಹಾಕುಂಭಮೇಳ ಫೆಬ್ರವರಿ 26 ಶಿವರಾತ್ರಿಯಂದು ಸಮಾಪ್ತಿಯಾಯಿತು. ಕುಂಭಮೇಳಕ್ಕೆ 45 ಕೋಟಿಗೂ ಅಧಿಕ ಮಂದಿ ಭೇಟಿ ನೀಡಿ ಪುಣ್ಯಸ್ನಾನ ಮಾಡಿ ಹೋಗಿದ್ದಾರೆ.

ಕುಂಭಮೇಳದಲ್ಲಿ ಒಂದು ಬಾರಿ ಕಾಲ್ತುಳಿತದ ಅನಾಹುತವೂ ಆಗಿದೆ. ಇದೀಗ ಕುಂಭಮೇಳ ಮುಗಿದ ಬಳಿಕ ಪ್ರಯಾಗ್ ರಾಜ್ ಬಿಕೋ ಎನ್ನುತ್ತಿದೆ. ಕೆಲವೇ ಜನ ಭೇಟಿ ಕೊಡುವುದು ಬಿಟ್ಟರೆ ಪ್ರಯಾಗ್ ರಾಜ್ ನಲ್ಲಿ ಮೊದಲಿನ ಜನ ಜಂಗುಳಿಯಿಲ್ಲ.

ಇದೀಗ ಯುವಕನೊಬ್ಬ ಮೆಟಲ್ ಡಿಟೆಕ್ಟರ್ ಹಿಡಿದುಕೊಂಡು ಗಂಗಾನದಿ ತಟದ ಮರಳಿನಲ್ಲಿ ಜನ ಕಳೆದುಕೊಂಡ ವಸ್ತುಗಳನ್ನು ಹುಡುಕಾಡುತ್ತಿದ್ದಾನೆ. ಆಗಲೇ ಆತನಿಗೆ ಒಂದು ಚೈನು, ಸ್ವಲ್ಪ ನಾಣ್ಯಗಳು ಸಿಕ್ಕಿವೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಶೂ ಒಳಗೆ ಮಲಗಲು ಈ ಬೆಕ್ಕು ಪಡುತ್ತಿರುವ ಹರಸಾಹಸದ ಕ್ಯೂಟ್ ವಿಡಿಯೋ ನೋಡಿ