Select Your Language

Notifications

webdunia
webdunia
webdunia
webdunia

ಕುಂಭಮೇಳದಲ್ಲಿ ಪಾಲ್ಗೊಳ್ಳದ ಭಕ್ತರಿಗೆ ಗುಡ್‌ನ್ಯೂಸ್‌: ಮನೆ ಬಾಗಿಲಿಗೆ ಬರಲಿದೆ ‌ಸಂಗಮ ಜಲ

Prayagraj Mahakumbha Mela

Sampriya

ಪ್ರಯಾಗ್‌ರಾಜ್ , ಶುಕ್ರವಾರ, 28 ಫೆಬ್ರವರಿ 2025 (13:53 IST)
ಪ್ರಯಾಗ್‌ರಾಜ್: 144 ವರ್ಷಕೊಮ್ಮೆ ನಡೆಯುವ ಮಹಾಕುಂಭಮೇಳ ಬುಧವಾರ ಮಹಾಶಿವರಾತ್ರಿಯೊಂದಿಗೆ ಸಂಪನ್ನಗೊಂಡಿದೆ. 45 ದಿನಗಳ ಕಾಲ ನಡೆದ ಧಾರ್ಮಿಕ ಮಹಾ ಉತ್ಸವದಲ್ಲಿ 66 ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ಥಾನ ಮಾಡಿದ್ದರು.

ನಾನಾ ಕಾರಣಗಳಿಂದ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಲು ಆಗದ ಭಕ್ತರಿಗೆ ಉತ್ತರ ಪ್ರದೇಶ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಭಕ್ತರ ಮನೆ ಬಾಗಿಲಿಗೆ ಸಂಗಮದ ಜಲ ವಿತರಿಸಲು ಸಿದ್ಧತೆ ನಡೆಸಿದೆ.

ಉತ್ತರ ಪ್ರದೇಶ ರಾಜ್ಯದಲ್ಲಿರುವ 75 ಜಿಲ್ಲೆಗಳ ಜನರಿಗೆ ಈ ಸಂಗಮದ ನೀರನ್ನು ವಿತರಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತುರ್ತು ಸೇವೆ ಮತ್ತು ಅಗ್ನಿಶಾಮಕ ಇಲಾಖೆಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಜನರ ಮನೆಬಾಗಿಲಿಗೆ ಸಂಗಮ ಜಲ ತಲುಪಲಿದೆ.

ಶುಕ್ರವಾರವೇ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಮ್ಮ ಮನೆಗಳಲ್ಲಿಯೇ ಗಂಗಾ ಜಲ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಭಕ್ತರ ಅಭಿಷ್ಠೆಯನ್ನು ಈಡೇರಿಸುವ ಕೆಲಸವನ್ನು ಸರ್ಕಾರ ಕೈಗೆತ್ತಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮುವಿನಲ್ಲಿ ಮುಂದುವರಿದ ವರುಣನ ಆರ್ಭಟ: ಮಳೆಗೆ ಬಂಡೆ ಉರುಳಿ ಇಬ್ಬರು ಸಾವು