ಪ್ರಯಾಗರಾಜ್: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಪ್ರತಿನಿತ್ಯ ಕೋಟ್ಯಂತರ ಭಕ್ತರು ಬಂದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ಥಾನ ಮಾಡಿ, ಭಕ್ತಿ ಪರಾಕಾಷ್ಟೇಯಲ್ಲಿ ಮಿಂದೇಳುತ್ತಿದ್ದಾರೆ.
ಇದೀಗ ಇಲ್ಲಿ ಪವಿತ್ರ ಸ್ಥಾನ ಭಕ್ತರಿಗೆ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯರು ಎಚ್ಚರಿಕೆ ನೀಡಿದ್ದು, ತ್ರಿವೇಣಿ ಸಂಗಮದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಯಾರೂ ಆ ನೀರನ್ನು ಕುಡಿಯಬೇಡಿ ಎಂದು ಸಲಹೆ ನೀಡಿದ್ದಾರೆ.
ತ್ರಿವೇಣಿ ಸಂಗಮದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಕುಂಭಮೇಳದಲ್ಲಿ ಈವರೆಗೂ 52 ಕೋಟಿಗೂ ಅಧಿಕ ಮಂದಿ ಸ್ನಾನ ಮಾಡಿದ್ದಾರೆ. ಇಷ್ಟು ಮಂದಿ ಸ್ನಾನ ಮಾಡುವ ಜಾಗದಲ್ಲಿ ಇದು ಸಂಭವಿಸುತ್ತದೆ ಎಂದು ನಾವು ಮೊದಲೇ ನಿರೀಕ್ಷಿಸಿದ್ದೆವು ಎಂದು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್‌ನ ಹಿರಿಯ ಸಲಹೆಗಾರರೊಬ್ಬರು ಮಾಹಿತಿ ನೀಡಿದ್ದಾರೆ.
ಕುಂಭಮೇಳಕ್ಕೆ ಆಗಮಿಸಿದ ಜನರ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಅಲ್ಲಿ ವೈದ್ಯಕೀಯ ಸಮಸ್ಯೆಗಳೊಂದಿಗೆ ಬರುವ ಜನರ ಸಂಖ್ಯೆ ತುಂಬಾ ಕಡಿಮೆ. ಆ ರೀತಿಯಲ್ಲಿ, ನಿಯಂತ್ರಣವು ತುಂಬಾ ಉತ್ತಮವಾಗಿದೆ. ಆದರೆ ಜನರು ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಅಲ್ಲಿ ಅವರಿಗೆ ಬೇದಿ, ವಾಂತಿ ಮತ್ತು ಎಲ್ಲವೂ ಇರುತ್ತದೆ. ಅವರು ನಿರ್ದಿಷ್ಟವಲ್ಲದ ಅಥವಾ ಅನಿರ್ದಿಷ್ಟ ಮೂಲದ ಜ್ವರವನ್ನು ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಭಕ್ತರು ಮನೆಯಿಂದ ನೀರು ಅಥವಾ ನೀರಿನ ಬಾಟಲಿಗಳನ್ನು ಕೊಂಡೊಯ್ಯಬೇಕು. ಉತ್ತಮ ಸ್ಥಳದಿಂದ ನೀರು ಕುಡಿಯಬೇಕು ಅಥವಾ ತಮ್ಮದೇ ಆದ ಬಾಟಲಿಗಳನ್ನು ಕೊಂಡೊಯ್ಯಬೇಕು. ಆರೋಗ್ಯಕರ ಸ್ಥಳದಿಂದ ಆಹಾರವನ್ನು ಸೇವಿಸುವುದು ಮತ್ತು ಹಸಿ ಆಹಾರಕ್ಕಿಂತ ಬೇಯಿಸಿದ ಆಹಾರವನ್ನು ಸೇವಿಸುವುದು....ಮಾಸ್ಕ್ ಧರಿಸಿ ಮತ್ತು ಜನರನ್ನು ದೂರದಲ್ಲಿಡಲು ಪ್ರಯತ್ನಿಸಿ...ನದಿಯಲ್ಲಿ ಸ್ನಾನ ಮಾಡುವಾಗ ನೀರನ್ನು ಕುಡಿಯಬೇಡಿ ಎಂದು ಅವರು ಭಕ್ತರಿಗೆ ಸಲಹೆ ನೀಡಿದ್ದಾರೆ.