Select Your Language

Notifications

webdunia
webdunia
webdunia
webdunia

ಆಸ್ಪತ್ರೆಯಲ್ಲಿನ ವಿಡಿಯೋ ಹಂಚಿ ಶೀಘ್ರ ಗುಣಮುಖನಾಗುತ್ತಿದ್ದೇನೆ ಎಂದ ಸದ್ಗುರು

Spiritual leader Sadhguru Jaggi Vasudev

Sampriya

ನವದೆಹಲಿ , ಸೋಮವಾರ, 25 ಮಾರ್ಚ್ 2024 (18:36 IST)
Photo Courtesy X
ನವದೆಹಲಿ: ಮೆದುಳಿನ ಸಮಸ್ಯೆಗೆ ತುರ್ತು ಶಸ್ತ್ರ ಚಿಕಿತ್ಸೆಗೊಳಗಾದ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಸ್ಪತ್ರೆಯ ಬೆಡ್‌ನಲ್ಲಿ ಕುಳಿತುಕೊಂಡು ದಿನಪತ್ರಿಕೆ ಓದುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಕಳೆದ ವಾರ ನವದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯ ಕೊಠಡಿಯೊಳಗಿನ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ವಿಡಿಯೋದಲ್ಲಿ ಸದ್ಗುರು ಅವರು ದಿನಪತ್ರಿಕೆಯನ್ನು ಓದುತ್ತಿದ್ದಾರೆ.
"ಸದ್ಗುರುಗಳು ನವದೆಹಲಿಯಲ್ಲಿ ಶೀಘ್ರವಾಗಿ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ" ಎಂದು ಸದ್ಗುರುಗಳು Instagram ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಸ್ಟ್‌ 1.7ಮಿಲಿಯನ್‌ ವೀಕ್ಷಣೆಯಾಗಿದೆ. ಅನೇಕರು ಪೋಸ್ಟ್‌ಗೆ ಕಮೆಂಟ್ ಮಾಡಿ ಆಧ್ಮಾತಿಕ ಗುರು ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆ 2024: 6ನೇ ಪಟ್ಟಿ ಪ್ರಕಟಸಿದ ಕಾಂಗ್ರೆಸ್