Publish Date: Mon, 21 Aug 2023 (14:48 IST)
Updated Date: Mon, 21 Aug 2023 (21:19 IST)
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿ ಹಬ್ಬದ ಸಂಭ್ರಮ ಸಡಗರ ನಾಡಿನಾದ್ಯಂತ ಮನೆ ಮಾಡಿದೆ. ಅದೇ ರೀತಿ ಈಶಾ ಫೌಂಡೇಷನ್ನಲ್ಲಿಯೂ ನಾಗರಪಂಚಮಿ ಹಾಗೂ ನಾಗಮಂಡಲ ಕಾಯರ್ಕ್ರಮ ಹಿನ್ನಲೆ ಸಂಭ್ರಮ ಮನೆ ಮಾಡಿತ್ತು. ಚಿಕ್ಕಬಳ್ಳಾಫುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಇರುವ ಈಶಾ ಫೌಂಡೇಷನ್ನತ್ತ ಜನಸಾಗರವೇ ಹರಿದು ಬರುತ್ತಿದೆ. ಈಶಾ ಫೌಂಡೇಷನ್ನತ್ತ ಜನರು ಹರಿದು ಬರುತ್ತಿದ್ದು, ಭಕ್ತಿಯಿಂದ ಪೂಜಾ-ಕೈಂಕರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಇಂದು ಸಂಜೆ ನಾಗಮಂಡಲ ಕಾರ್ಯಕ್ರಮ ನಡೆಯಲಿದೆ. 112 ಅಡಿಯ ಆದಿಯೋಗಿ ವಿಗ್ರಹದ ಮುಂದೆ ಇಂದು ಸಂಜೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಲಿವೆ.