Publish Date: Mon, 21 Aug 2023 (13:57 IST)
Updated Date: Mon, 21 Aug 2023 (12:59 IST)
ಬೆಂಗಳೂರು : ಮಹದಾಯಿ, ಕಾವೇರಿ ನೀರು ವಿಚಾರವಾಗಿ ಇದೇ ಆಗಸ್ಟ್ 23 ರಂದು ಸರ್ವಪಕ್ಷಗಳ ಸಭೆ ನಡೆಯಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ಬೆಳಗ್ಗೆ 11 ಗಂಟೆಗೆ ಸರ್ವಪಕ್ಷಗಳ ಸಭೆ ನಡೆಯಲಿದೆ. ಸಭೆಗೆ ಸಿಎಂ ಅವರೇ ದಿನಾಂಕ ನಿಗದಿ ಮಾಡಿದ್ದು, ಎಲ್ಲ ಸಂಸದರನ್ನ ಆಹ್ವಾನಿಸಲಾಗಿದೆ. ಸಭೆಯಲ್ಲಿ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಆ.21ರಂದು ಮಾಜಿ ಕಾರ್ಪೊರೇಟರ್ಸ್ ಸೇರಿದಂತೆ ಹಲವರ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರೂ ಅರ್ಜಿ ಹಾಕಿಲ್ಲ, ಮುಂದೆ ಕಾದು ನೋಡಬೇಕು. ಅವರವರ ಬದುಕು ಭವಿಷ್ಯ ನೋಡಿಕೊಳ್ತಾರೆ. ಸಿಟಿ ರವಿ ಹಿರಿಯರಿದ್ದಾರೆ, ಅವರು ಬೆದರಿಕೆಯೊಡ್ಡುತ್ತಿದ್ದಾರೆ,
ಕೈಕತ್ತರಿಸಿಬಿಡ್ತೀವಿ ಅಂತಾ? ಜೆಡಿಎಸ್, ಕಾಂಗ್ರೆಸ್ ಶಾಸಕರನ್ನ ಕರ್ಕೊಂಡು ಮಜಾ ಮಾಡಿದ್ರಲ್ಲ ಆವಾಗ ಏನಾಗಿತ್ತು? ಅವರ ರಾಜಕಾರಣ ಅವರು ಮಾಡಲಿ, ನಿಮಗೆ ಬರೋ ಬೆದರಿಕೆ ತರ, ಬೇರೆಯವರಿಗೂ ಬರುತ್ತೆ. ನಾವು ಯಾರನ್ನೂ ಕರೀತಿಲ್ಲ. ನಮಗಿರೋ ನಂಬರ್ಗೆ ಯಾರೂ ಅವಶ್ಯಕತೆ ಇಲ್ಲ. ಆದ್ರೆ ಪಕ್ಷಕ್ಕೆ ಬರೋರನ್ನ ನಾನು ತಡೆಯೋಕೆ ಆಗುತ್ತಾ? ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗುತ್ತಾ? ಎಂದು ಟಾಂಗ್ ಕೊಟ್ಟಿದ್ದಾರೆ.