ಈಜಿಪುರ ಫ್ಲೈಒವರ್ ಕಾಮಗಾರಿ ವೀಕ್ಷಣೆ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಈಜಿಪುರ ಫ್ಲೈ ಓವರ್ ಕಾಮಾಗಾರಿ ಬಹಳ ವರ್ಷದಿಂದ ನಿಂತು ಹೋಗಿದೆ.2014ರಲ್ಲಿ ಈ ಕಾಮಾಗಾರಿ ಪ್ರಾರಂಭ ವಾಗಿತ್ತು 2017 ರಲ್ಲಿ ನಿಂತು ಹೋಗಿದೆ.ಕೇವಲ ಶೇಕಡಾ 30% ಕೆಲಸ ಮಾಡಿ ಬಿಟ್ಟು ಹೋಗಿದ್ದಾರೆ.ಕಂಪನಿಯವರ ವಿರುದ್ಧ ಪಾಲಿಕೆ ಲೀಗಲ್ ಟೀಮ್ ಕೋಟ್ ನಲ್ಲಿ ಧಾವೆ ಹಾಕಿದ್ದು ಲೀಗಲ್ ಸಮಸ್ಯೆಗಳು ಮುಗಿದಿವೆ.ಇವಾಗ ಮರು ಟೆಂಡರ್ ಕರೆದಿದ್ದಾರೆ ಆದ್ರೇ ಯಾರು ಟೆಂಡರ್ ಹಾಕುತ್ತಿಲ್ಲ.ಒಟ್ಟು 300 ಕೋಟಿಗಳಷ್ಟು ಹಣ ಬೇಕಾಗುತ್ತೆ.ಕೋರ್ಟ್ ಲಿಟಿಕೇಶನ್ ಎಲ್ಲವೂ ಕ್ಲಿಯರ್ ಆಗಿದೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.