Select Your Language

Notifications

webdunia
webdunia
webdunia
webdunia

ಹವಾಗಾಗಿ ಲಾಂಗ್ ಬೀಸಿದ ವಿಡಿಯೋ ಮಾಡಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ ಪುಡಿರೌಡಿ

ಪುಡಿರೌಡಿ
ಸರಿಯಾಗಿ ಮಿಸೆ ಚಿಗುರಿಲ್ಲ. ಕೈಯಲ್ಲಿ ಹಿಡಿದಿರೋ ಮಚ್ಚಿನಷ್ಟು ಎತ್ತರವಿಲ್ಲ. ಆದ್ರೂ ಹವಾ ಮೈಟೇನ್ ಗಾಗಿ ಲಾಂಗ್ ಹಿಡಿದು ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾನೆ. ಅದು ಕೂಡ ಇವ್ರ ಅಣ್ಣನ ಬಾಸ್ ಅನ್ನಬೇಕು ಅಂತ. ಅಂದಹಾಗೆ ಇವ್ರ ಅಣ್ಣ ಕೂಡ ಏನೂ‌ ದೊಡ್ಡ ವ್ಯಕ್ತಿ ಏನಲ್ಲ. ಅವ್ನು ಕೂಡ ಇನ್ನು ಎಳೆ ವಯಸ್ಸಿನ ಪುಡಿ ರೌಡಿ. ಬ್ಯಾಡರಹಳ್ಳಿ ಠಾಣೆ ರೌಡಿ ಶೀಟರ್ ಅಂದ್ರಳ್ಳಿ ಜಗ್ಗಿ, ಈ ಜಗ್ಗಿನ ಬಾಸ್ ಅನ್ ಬೇಕು ಅಂತ ಅವನ ತಮ್ಮ ಅಭಿ ಈ ರೀತಿ ಮಚ್ಚು ಹಿಡಿದು ಯುವಕನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾನೆ. ಸಾಲದು ಅಂತ ಅದನ್ನ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿ ವಾರ್ನ್ ಕೂಡ ಮಾಡಿದ್ದಾನೆ. ಇದೆಲ್ಲಾ ಸಾಲದು ಅಂತ ಅಂದ್ರಳ್ಳಿಗೆ ಜಗ್ಗಿನೇ ಬಾಸ್ ಅಂತ ರೀಲ್ಸ್ ನಲ್ಲಿ ಬಾಡಿಗೆ ಬಿಲ್ಡಪ್ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಇಷ್ಟಾದ್ರು ಬ್ಯಾಡರಹಳ್ಳಿ ಪೊಲೀಸ್ರು ಮಾತ್ರ ಕಂಡು ಕಾಣದಂತೆ ಸುಮ್ಮನೆ ಕುತಂಗೆ ಕಾಣ್ತಿದೆ. ಯಾಕಂದ್ರೆ ಇಂಥಹ ಪುಡಿರೌಡಿಗಳನ್ನ ಸಣ್ಣದ್ರಲ್ಲೆ ಮಟ್ಟ ಹಾಕದಿದ್ರೆ ಮುಂದೊಂದು ದಿನ ದೊಡ್ಡ ರೌಡಿಗಳಾಗೋದ್ರಲ್ಲಿ ಡೌಟೇ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಹಸ್ತದ ಬಗ್ಗೆ ಶಾಸಕ ಡಾ‌.ಅಶ್ವಥ್ ನಾರಾಯಣ ಲೇವಡಿ