Select Your Language

Notifications

webdunia
webdunia
webdunia
webdunia

ಯಾರೂ ಪಕ್ಷ ಬಿಟ್ಟು ಹೋಗಲ್ಲ-ಬಿಜೆಪಿ ನಾಯಕರ ಸ್ಪಷ್ಟನೆ

BJP leaders
bangalore , ಶನಿವಾರ, 19 ಆಗಸ್ಟ್ 2023 (15:30 IST)
ಈ ರಾಜ್ಯವನ್ನು ಗೂಂಡಾರಾಜ್ಯ ಮಾಡಲು ಸರ್ಕಾರ ಹೊರಟಿದೆ .ನಾವು ಯಾವುದೇ ಬಿಲ್ ತಡೆ ಹಿಡಿದಿಲ್ಲ.ಇವತ್ತು ಕಮಿಷನ್ ದಂಧೆಗಾಗಿ ಧಮ್ಕಿ ಕಾಂಗ್ರೆಸ್ ನವರು ಹಾಕುತ್ತಾರೆ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.ಅಲ್ಲದೇ ಯಾರು ಪಕ್ಷ ಬಿಟ್ಟು ಹೋಗಲ್ಲ ,ಇಲ್ಲ ಸಲ್ಲದ ಸುದ್ದಿ ಹಬ್ಬಿಸಬೇಡಿ ಎಂದು ಆರ್ ಅಶೋಕ್ ಹೇಳಿದ್ರು.
 
ಇನ್ನೂ ಇತ್ತ ಕೆ. ಗೋಪಾಲಯ್ಯ ಇವತ್ತು ಒಂದು ಸಾವಿರಕ್ಕೂ ಹೆಚ್ಚು ಕಾಲ್ ಬಂದಿವೆ.ನನ್ನ ತೇಜೋವಧೆ ಮಾಡಬೇಡಿ.ನಾವು ಬಿಜೆಪಿಯಲ್ಲೇ ಉಳಿಯುತ್ತೇವೆ.ಇನ್ನೂ ಐದು ವರ್ಷ ಬಿಜೆಪಿಯಲ್ಲೇ ಇರುತ್ತೇವೆ.ಕೇಂದ್ರದಲ್ಲಿ ಮೋದಿ ಗೆಲುವಿಗೆ ಕೆಲಸ ಮಾಡುತ್ತೇವೆ ಎಂದು ಕೆ ಗೋಪಾಲಯ್ಯ ಹೇಳಿದ್ರು.
 
ಸಚಿವ ಮುನಿರತ್ನ ಬೈರತಿ‌ ಬಸವರಾಜ ಫೋನ್ ಮಾಡಿದ್ದರು.ನಾವು ಎಂತಹದೇ ಸಮಯದಲ್ಲಿ ಪಕ್ಷ ಬಿಡುವುದಿಲ್ಲ ಎಂದು ತಿಳಿಸಲು ಹೇಳಿದ್ದಾರೆ.ಯಾರೂ ಪಕ್ಷ ಬಿಟ್ಟು ಹೋಗಲ್ಲ.ಬೈರತಿ‌ ಬಸವರಾಜ, ಕೆ. ಗೋಪಾಲಯ್ಯ, ನಾನು ಪಕ್ಷ ಬಿಟ್ಟು ಹೋಗಲ್ಲ ಎಂದು ಮುನಿರತ್ನ ಹೇಳಿದ್ದಾರೆ.ಸೋಮಶೇಖರ್ ಹೆಸರು ಹೇಳಿಲ್ಲ ಎಂದಾಗ ಸೋಮಶೇಖರ್ ಸಹ ಎಂದು ಮುನಿರತ್ನ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾದ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು