ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಡಿಸಿಎಂ ಡಿ. ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದ್ರೂ ಪ್ರತಿಭಟನೆ ಮಾಡಬಹುದು.ಯಾರು ಪ್ರತಿಭಟನೆ ಮಾಡಬೇಡಿ ಅಂತ ಹೇಳೋಕೆ ಆಗಲ್ಲ.ಮೊದಲು ಅವರ ನಾಯಕರು ಯಾರು ಅಂತ ತೀರ್ಮಾನ ಮಾಡಿಕೊಳ್ಳಲಿ.ನಂತರ ಪ್ರತಿಭಟನೆ ಮಾಡಲಿ ಅಂತಾ ಡಿಕೆಶಿವಕುಮಾರ್ ಹೇಳಿದ್ದಾರೆ
 
 			
 
 			
			                     
							
							
			        							
								
																	
	 
	ಶಾಸಕರ '  ಘರ್ ವಾಪಸಿ' ಆಗುತ್ತಿರುವ ವಿಚಾರವಾಗಿ ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ.ಯಾರಾದರೂ ರಾಜಕೀಯ ಭವಿಷ್ಯಕ್ಕೆ ಭಾರತಕ್ಕೆ ಒಳ್ಳೆಯದು ಮಾಡಬೇಕು ಅಂದ್ರೆ ನಮ್ಮ ರಾಜ್ಯ ಬೇರೆ ಬೇರೆ ರಾಜ್ಯದಲ್ಲಿ ಏನಾಗಿತ್ತು..?ಮಹಾರಾಷ್ಟ್ರ, ಮಧ್ಯ ಪ್ರದೇಶ, ಈ ಹಿಂದೆ ಕರ್ನಾಟಕದಲ್ಲಿ ಇವರು ಮಾಡಿದ್ದು  ಸರಿಯಾ..?ಅವರದೆಲ್ಲ ಬಹಳ ಕರೆಕ್ಟ್.ಅವರವರ ಅನುಕೂಲಕ್ಕೆ ತಕ್ಕಂತೆ ಅವರು ತೀರ್ಮಾನ ಮಾಡಿಕೊಳ್ತಾರೆ.ನೀವು ನಾವೆಲ್ಲರೂ ನೆಪ್ಪ.ಯಾವ ಯಾವ ಸಂಧರ್ಭದಲ್ಲಿ ಯಾರೆಲ್ಲಾ ಏನೇನು ಮಾತಾಡೋಕೆ ಬಂದಿದ್ರು ಅಂತಾ ಬಿಚ್ಚಿಡಬೇಕಾ..? ಎಂದು ಡಿಕೆಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.