ಕಳೆದ ಎರಡು ವರ್ಷಗಳಿಂದಲೂ ಕೂಡ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ ಆಲ್ಬರ್ಟ್, ಈ ರೀತಿ ಘಟನೆಯಾದದ್ದು ಮತ್ತು ಈ ರೀತಿ ಹುಡುಗರು ಒಡಾಡೋದನ್ನ ನೋಡೊರಲಿಲ್ಲ, ಅಸಲಿಗೆ ಆತ ಅಲ್ಲಿಗೆ ಯಾಕೆ ಬಂದಿದ್ದ ಅನ್ನೋದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ, ಸೆಕ್ಯುರಿಟಿ ಗಾರ್ಡ್ ಆಲ್ಬರ್ಟ್ ಹೇಳೋಪ. ಪ್ರಕಾರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದದಂತಹ ಸಮಯದಲ್ಲಿ ಪೊಲೀಸರು ಹೆಚ್ಚಾಗಿದ್ರು, ಪುಡಿರೌಡಿಗಳು ಈ ಭಾಗದಲ್ಲಿ ಓಡಾಡ್ತಾಯಿರಲಿಲ್ಲ, ಸದ್ಯ ಅಲ್ಲಿಯೂ ಕೂಡ ಪೊಲೀಸರ ಸಂಖ್ಯೆ ಕಡಿಮೆ ಇದೆ ಅದನ್ನೆ ಬಂಡವಾಳ ಮಾಡಿಕೊಂಡಿರಬಹುದಯ ಎಂಬುದಾಗಿ ಶಂಕೆ ವ್ಯಕ್ತಪಡಿಸಿದ್ರು, ಇನ್ನೂ ಘಟನೆಯಾದ ಬಳಿಕ ಪೊಲೀಸರಿಗೆ ಕರೆ ಮಾಡಿದೆ ಸ್ವೀಕರಿಸಲಿಲ್ಲ ಹಾಗೂ ಪೊಲೀಸ್ ಸಹಾಯವಾಣಿ 122 ಗೂ ಕರೆ ಮಾಡಿದೆ ಅಲ್ಲೂ ಕೂಡ ಯಾವುದೇ ರೆಸ್ಪಾಂಡ್ ಮಾಡಿಲಿಲ್ಲ ಎಂದು ಪೊಲೀಸರ ಮೇಲೆ ಅಸಹಾಯಕತೆ ವ್ಯಕ್ತಪಡಿಸಿದ್ರು ಈ ಆಲ್ಬರ್ಟ್ ,ಇನ್ನೂ ನಾವು ಬಡವರು ತುತ್ತು ಅನ್ನಕ್ಕಾಗಿ ದುಡಿಯುತ್ತಿರುತ್ತೇವೆ, ನನ್ನ ಮೇಲೆ ಆಗಿರೋ ಹಲ್ಲೆಯಿಂದ ಕೆಲ ಸೆಕ್ಯುರಿಟಿ ಗಾರ್ಡ್ ಗಳು ಕೆಲಸ ಮಾಡಲು ಹಿಂದೇಟು ಹಾಕ್ತಾಯಿದ್ದಾರೆ ಎಂದು ಭಯಭೀತಿ ಗೊಂಡರು.ಇಂತಹ ಪುಡಿರೌಡಿಗಳನ್ನ ನಗರದಾದ್ಯಂತ ಮುಟ್ಟುಗೋಲು ಹಾಕದೇ ಇದ್ರೆ ಇಂತಹ ಘಟನೆಗಳು ಮತ್ತಷ್ಟು ಹೆಚ್ಚಾಗೋ ಸಾಧ್ಯತೆಗಳಿವೆ, ರಾತ್ರಿ ಪಾಳಿಯದಲ್ಲಿ ಕೆಲಸ ಮಾಡೋ ಸಿಬ್ಬಂದಿಗಳಿಗೂ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಬೇಕಾಗಿದೆ.