ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬರೀ ಅಕ್ಕಿಯದೇ ಸದ್ದು..ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜಾರಿಗೆ ತರುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಅಡ್ಡಗಾಲು ಹಾಕ್ತಿದೆ ಎಂದು ಕಾಂಗ್ರೆಸ್ ಆರೋಪಿಸುತಿದೆ...ಇನ್ನೊಂದು ಕಡೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಕೂಡ ಪ್ರೋಟೇಸ್ಟ್ ನಡೆಸಿದೆ..ಅಕ್ಕಿ ಕೊಡ್ತಿನಿ ಎಂದು ಈಗ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡದತಿರೊದು ಎಷ್ಟು ಸರಿ ಎಂದು ಬಿಜೆಪಿ ಕೂಡ ಇಂದು ಪ್ರತಿಭಟನೆ ನಡೆಸಿತ್ತು..ಅಕ್ಕಿ ವಿಚಾರ ಕಟ್ಟಿಕೊಂಡು ಇಂದು ಆಡಳಿತ ಹಾಗೂ ವಿಪಕ್ಷ ಪ್ರೋಟೇಸ್ಟ್ ಪಾಲಿಟಿಕ್ಸ್ ನಡೆಸಿದ್ರು.ರಾಜ್ಯಾದ್ಯಂತ ಪ್ರತಿಭಟನೆ ರಾಜಕೀಯ ಸದ್ದು ಮಾಡಿದೆ.ಜೋರು ಮಳೆಯಲ್ಲಿ ಕೂಡ ಅಕ್ಕಿ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಿದ್ರು..ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಫೇಲ್ ಮಾಡಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಒಂದು ಕಡೆ ಕಾಂಗ್ರೆಸ್ ಪ್ರತಿಭಟನೆ ಶುರುಮಾಡಿದ್ರೆ..ಇನ್ನೊಂದು ಕಡೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ನಾಯಕರು ಕೂಡ ಪ್ರೋಟೇಸ್ಟ್ ನಡೆಸಿದ್ರು..ರಾಜ್ಯದ ಜನರಿಗೆ ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ..ಈಗ ತಮ್ಮ ಕೊಟ್ಟ ಭರವಸೆ ಈಡೆರಿಸಲು ಆಗದೇ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತಿದೆ ಎಂದು ಆರೋಪಿಸಿ ಕಮಲ ಕಲಿಗಳು ನಗರದ ಮೌರ್ಯ ಸರ್ಕಲ್ ಬಳಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಜೋರು ಮಳೆಯಲ್ಲಿಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್‌ನವರಿಗೆ ಪ್ರತಿಭಟನೆಗೆ ಪೋಲೀಸರು ಅವಕಾಶ ಕೊಟ್ಟಿದ್ದಾರೆ. ಆದರೆ ನಮಗೆ ಅವಕಾಶ ಕೊಟ್ಟಿಲ್ಲ. ನಿಮ್ಮ ಪೊಲೀಸ್ ರಾಜ್ಯಕ್ಕೆ ನಾವು ಹೆದರಲ್ಲ. ನಿಮ್ಮ ಲಾಠಿಯಲ್ಲಿ ಶಕ್ತಿ ಇದೆಯೋ? ನಮ್ಮ ರಟ್ಟೆಯಲ್ಲಿ ಶಕ್ತಿ ಇದೆಯೋ ನೋಡೋಣ ಎಂದು ಠಾಣೆ ಆವರಣದಲ್ಲೇ ಕೂತು ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಸವಾಲ್ ಹಾಕಿದರು.
ಇನ್ನು ಪೋಲಿಸ್ ಸ್ಟೇಷನ್ ಆವರಣದಲ್ಲಿ ಕುತು ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಸುದ್ದಿಗೊಷ್ಟಿ ನಡೆಸಿದ್ರು..ಇದೊಂದು ಸುಳ್ಳ-ಮಳ್ಳ ಸರ್ಕಾರ. ಸುಳ್ಳು ಹೇಳುವುದು ಮಳ್ಳನ ತರಹ ಮೋಸ ಮಾಡುವುದು. ನಾವು 10 ಕೆ ಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಇಂದು ಒಂದು ಕೆಜಿ ಕೂಡ ಕೊಡೋಕೆ ಇವರಿಂದ ಆಗುತ್ತಾ ಇಲ್ಲ. ಈಗ 5 ಕೆ ಜಿ ಅಕ್ಕಿ ಕೊಡುತ್ತಿರುವುದು ಕೇಂದ್ರ ಸರ್ಕಾರದಿಂದ. ಸುಳ್ಳು ಹೇಳುವ ಕಾಂಗ್ರೆಸ್ ಸರ್ಕಾರದಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ.ನಿಮಗೆ ಗ್ಯಾರಂಟಿ ಕೊಡುವಾಗ ಗೊತ್ತಿರಲಿಲ್ಲವಾ? ನಿಮಗೆ ನಿಜವಾಗಿಯೂ ಧಮ್, ತಾಕತ್ ಇದ್ರೆ ಎಲ್ಲ ಕಡೆಯಿಂದ ಅಕ್ಕಿ ಶೇಖರಣೆ ಮಾಡಿ ಒಬ್ಬರಿಗೆ 15 ಕೆಜಿಯಂತೆ ಅಕ್ಕಿ ಕೊಡಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಬೊಮ್ಮಾಯಿ ಸವಾಲು ಹಾಕಿದರು
ಅಕ್ಕಿ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ.ಕಾಂಗ್ರೆಸ್ ತನ್ನ ಗ್ಯಾರಂಟಿಗಳನ್ನು ಯಾವ ರೀತಿ ಈಡೆರಿಸಲಿದೆ ಎಂದು ಬಿಜೆಪಿ ಆಡಳಿತ ಪಕ್ಷದ ಮೇಲೆ ಹದ್ದಿನ ಕಣ್ಣಿಟ್ಟಿದೆ..ಒಂದ್ವೆಳೆ ಕಾಂಗ್ರೆಸ್ ತನ್ನ ಗ್ಯಾರಂಟಿಗಳನ್ನು ಈಡೆರಿಸಿಲ್ಲ ಅದ್ರೆ ರಾಜ್ಯಾದ್ಯಂತ ಹೊರಟ ನಡೆಸಲು ವಿಪಕ್ಷ ತಯಾರಿ ನಡೆಸ್ತಿದೆ.ಒಟ್ನಲ್ಲಿ ಈ ಅಕ್ಕಿ ಜಟಾಪಟಿಗೆ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಇತಿ ಶ್ರೀ ಹಾಡುತ್ತಾ ಅಥವಾ ವಿಪಕ್ಷಗಳಿಗೆ ಗುರಿಯಾಗುತ್ತಾ ಅನ್ನೊದು ಕಾದು ನೋಡಬೇಕಿದೆ.