Publish Date: Tue, 20 Jun 2023 (18:00 IST)
Updated Date: Tue, 20 Jun 2023 (19:18 IST)
ವಿದ್ಯುತ್ ದರ ಏರಿಕೆ ಖಂಡಿಸಿ ಬೆಸ್ಕಾಂ ಕಚೇರಿಗೆ ನೇಕಾರರು ಮುತ್ತಿಗೆ ಹಾಕಿರುವ ಘಟನೆ ದೊಡ್ಡಬಳ್ಳಾಪುರ ನಗರದ ಬೆಸ್ಕಾಂ ಕಚೇರಿ ಬಳಿ ನಡೆದಿದೆ. ಇತ್ತೀಚೆಗೆ ನೇಕಾರರ ವಿದ್ಯುತ್ ಬಿಲ್ ಏರಿಕೆ ಮಾಡಿರುವ ಸರ್ಕಾರದ ವಿರುದ್ದ ನೇಕಾರರ ಸಂಘಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.. ವಿದ್ಯುತ್ ನೇಕಾರರ ಹೆಚ್.ಪಿ ಒಂದಕ್ಕೆ 80 ರೂ ರಿಂದ 140 ಕ್ಕೆ ಹೆಚ್ಚಳ ಮಾಡಿದೆ ಅಂತಾ ಕಿಡಿಕಾರಿದ್ದಾರೆ.. ನೇಕಾರರ ಮಿಟರ್ ಮಿನಿಮಮ್ ಚಾರ್ಜ್ ಇಳಿಕೆ ಮಾಡಿ ಕೂಡಲೇ ವಿದ್ಯುತ್ ಏರಿಕೆ ವಾಪಸ್ ಪಡೆಯುವಂತೆ ನೇಕಾರರು ಆಗ್ರಹಿಸಿದ್ದಾರೆ