Select Your Language

Notifications

webdunia
webdunia
webdunia
webdunia

ಹುಡುಗಿಗಾಗಿ ಲಾಂಗ್ ಬೀಸಿದ ರೌಡಿ ಶೀಟರ್

A long-winded rowdy sheeter for a girl
bangalore , ಶನಿವಾರ, 11 ಮಾರ್ಚ್ 2023 (18:05 IST)
ಹುಡುಗಿಯರ ಮುಂದೆ  ಬಿಲ್ಡಪ್ ಕೋಡೊದ್ರಲ್ಲಿ ಹುಡುಗರು ಯಾವಾಗಲೂ ಒಂದು ಕೈ ಮುಂದೇನೆ ಇರ್ತಾರೆ,  ಆದ್ರಲ್ಲೂ ಒಂಚೂರು ಎಣ್ಣೆ ಏನಾದ್ರು ಬಿಟ್ಕೊಂಡ್ರೆ ಕಥೆ ಮುಗಿದೆಹೋಯ್ತು, ಶೋ ಕೊಡೋಕ್ಕೋಗಿ ಈಗ ಪೋಲಿಸರ ಕೈಲಿ ತಗಲ್ಲಾಕ್ಕೋಂಡವರ ಕಥೆಯಿದು.ಕೈಯಲ್ಲಿ ಮಾರುದ್ದ ಲಾಂಗ್ ಹಿಡಿದು ,ಬಾರ್ ಸಿಬ್ಬಂದಿ ಮೇಲೆ ಬೀಸಿದ್ದು ಅಲ್ದೆ.ಮದ್ಯದ ಬಾಟಲ್‌ಗಳನ್ನ ಪೀಸ್ ,ಪೀಸ್ ಮಾಡಿದ್ದಾನೆ.ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಆಡುಗೋಡಿಯ ನೀಲಾ ಬಾರ್ ನಲ್ಲಿ ಉತ್ತರ ಪ್ರದೇಶ ಮೂಲದ ಮೀಶೋ ಹಾಗೂ ಅಸ್ಥಾಬ್ ಇಬ್ಬರು ಲವರ್ಸ್ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ಲ್ಲೇ ವಾಸಮಾಡಿಕೊಂಡಿದ್ದಾರೆ.
 
ಯುವತಿ ಮೀಶೋ ಬರ್ತಡೆ ಇತ್ತು ಅಂತ ಕೋರಮಂಗಲದ  ಬಾರ್ ವೊಂದರಲ್ಲಿ  ಎಣ್ಣೆ ಪಾರ್ಟಿ ಮಾಡಿದ್ದಾರೆ .ಜತೆಯಲ್ಲಿ ರೌಡಿ ಶೀಟರ್ ಗಳಾದ ಸಂತೋಷ್, ರಾಮಾಂಜಿ, ಹಾಗೂ ಮತ್ತೊಬ್ಬ ವಾಸಿಂ ಪಾಷ ಐದು ಜನ ಪಾರ್ಟಿ ಮಾಡಿ
ಅಲ್ಲಿಂದ ಬಂದವರೇ ಮತ್ತೆ ಸೀದಾ  ಆಡುಗೋಡಿಯ ನೀಲಾ ಬಾರ್ ಗೆ ಅಲ್ಲಿಗೆ ಬಂದಿದ್ದಾರೆ  ಅಲ್ಲಿ ಕೂಡ ಸರಿಯಾಗಿ ಎಣ್ಣೆ ಕುಡಿದ್ದಿದ್ದಾರೆ. ಕ್ಯಾಶಿಯಾರ್ ಪಕ್ಕದಲ್ಲಿ ನಿಂತಿದ್ದ ಯುವತಿ ಮೀಶೋಳನ್ನ ಪಕ್ಕಕ್ಕೆ ಹೋಗುವಂತೆ ಬಾರ್ ಸಿಬ್ಬಂದಿ ಹೇಳಿದ್ದಾರೆ ಅಷ್ಟೇ ಅದನ್ನೆ ತಪ್ಪಾಗಿ ಅರ್ಥೈಸಿಕೊಂಡಿದ್ದಾಳೆ .

 ಇದನ್ನು ಕಂಡ ರೌಡೀ ಶೀಟರ್ ಸಂತೋಷ್ ಕೈಯಲ್ಲಿ ಲಾಂಗ್ ಹಿಡಿದು ಬಾರ್ ಸಿಬ್ಬಂದಿ ಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಅಲ್ದೆ ಮದ್ಯದ ಬಾಟಲಿಗಳನ್ನ ಕೂಡ ಪೀಸ್ ಪೀಸ್ ಮಾಡಿ ದರ್ಪ ಮೇರೆದಿದ್ದಾನೆ. ಇಷ್ಟಕ್ಕೆ ನಿಲ್ಲದ ಇವನ ಗಲಾಟೆ ಅವಾಚ್ಯಶಬ್ಧಗಳಿಂದ ಬೈದು ನಿಂದನೆ ಮಾಡಿದ್ದಾನೆ.ಇಷ್ಟೆಲ್ಲ ದೃಶ್ಯಗಳು ಬಾರ್ನಲ್ಲಿದ್ದ ಸಿಸಿಟಿಯಲ್ಲಿ ಸೆರೆಯಾಗಿದೆ.ಕುಡಿದ ಮತ್ತಿನಲ್ಲಿ  ಹುಡುಗಿಯ ಮುಂದೆ ಶೋ ಕೊಟ್ಟು ಲಾಂಗ್ ಬೀಸಿದ್ದವರು ತಾವು ಕುಡಿದಿದ್ದ ಎಣ್ಣೆಯ ಬಿಲ್ ನ್ನೂ ಕೂಡ ಕೊಟ್ಟಿದ್ರು. ಆದ್ರೇ ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಮಾಡಿ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂದ ಆಡುಗೋಡಿ ಠಾಣೆಗೆ ಬಾರ್ ಮಾಲೀಕ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಖಾಕಿ ಟೀಂ ರೌಡಿ ಶೀಟರ್ ಸಹಿತ ನಾಲ್ವರನ್ನ ಅರೆಸ್ಟ್ ಮಾಡಿ ತನಿಖೆ ನಡೆಸುತ್ತಿದ್ದಾರೆ.
 
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಹಾಲಿ ಮಾಜಿ ಶಾಸಕರಿಗೆ ಕಾಂಗ್ರೆಸ್‌ ಗಾಳ