ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳಿಗೆ ಯಾವಾಗ ಪರಿಹಾರ.?ಎಂದು ಜನ ಪ್ರಶ್ನೆ ಮಾಡ್ತಿದ್ದಾರೆ.ಶ್ರೀಹರಿ ಹಾಗೂ ತಂಡ ನೀಡಿರುವ ವರದಿಯಲ್ಲಿ ಬೆಂಗಳೂರಿಗೆ ಶಾಕಿಂಗ್ ಸುದ್ದಿ ಬಹಿರಂಗವಾಗಿದ್ದು,ಬೆಂಗಳೂರು ಟ್ರಾಫಿಕ್ ಸಮಸ್ಯೆಯಿಂದಾಗಿ ಬಾರಿ ನಷ್ಟ ಉಂಟಾಗಿದೆ.
ಹತ್ತಾರು ಜಂಕ್ಷನ್ ಗಳ ಬಳಿ ತಂಡ ಪರೀಶಿಲಾನೆ ನಡೆಸ್ತಿದೆ.ಈ ವೇಳೆ ವಾಹನಗಳ ವೇಗ ಕೇವಲ ಗಂಟೆಗೆ 8 ಕಿ.ಮೀ ಅಂದ್ರೆ ಆರೋಗ್ಯವಂತ ಮನುಷ್ಯ ನಡೆಯುವ ವೇಗಕ್ಕಿಂತಲು ವಾಹನಗಳ ವೇಗ ಕಡಿಮೆ ಇದೆ.ಅವೈಜ್ಞಾನಿಕ ಸಿಗ್ನಲ್ ಗಳಿಂದಾಗಿ ಸಮಸ್ಯೆ ಹೆಚ್ಚಾಗುತ್ತಿದೆ.ಅಮೂಲ್ಯ ಸಮಯವನ್ನು ಟ್ರಾಫಿಕ್ ನಲ್ಲೇ ಬೆಂಗಳೂರಿಗರು ಕಳೆಯುತ್ತಿದ್ದಾರೆ.
ಫ್ಯೂಲ್,ಸಮಯ,ಶಕ್ತಿ ಇವೆಲ್ಲವನ್ನೂ ದುಡ್ಡಿಗೆ ಪರಿವರ್ತಿಸಿದಾಗ ವಾರ್ಷಿಕವಾಗಿ ಬೆಂಗಳೂರಿಗೆ 19 ಸಾವಿರ ಕೋಟಿ ನಷ್ಟ ಅನುಭವಿಸುತ್ತೆ.ಈ ವರದಿ ಬೆಚ್ಚಿ ಬೀಳಿಸಿದ್ದು ರಾಷ್ಟ್ರ ಮಟ್ಟದಲ್ಲಿ ಶ್ರಿ ಹರಿ ವರದಿ ಸದ್ದು ಮಾಡಿದೆ.ಸದ್ಯ ಡಿಸಿಎಂ ಅಂಗಳದಲ್ಲಿ ಈ ವರದಿ,ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಿದೆ.