Select Your Language

Notifications

webdunia
webdunia
webdunia
webdunia

ರಾಜಕೀಯ ನಿವೃತ್ತಿ ಪಡೆಯುತ್ತೆನೋ ಹೊರತು,ಕಾಂಗ್ರೆಸ್ ಸೇರಲ್ಲ- ಶಾಸಕ ಮುನಿರತ್ನ

ಶಾಸಕ ಮುನಿರತ್ನ
ಶಾಸಕ ಮುನಿರತ್ನ ಸುದ್ದಿಗೋಷ್ಠಿ ನಡೆಸಿದ್ದು ,ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ವಿಚಾರವಾಗಿ 17 ಜನರಲ್ಲಿ ಯಾರು ಹೋಗ್ತಾರೊ ಗೊತ್ತಿಲ್ಲ.ನಾನಂತೂ ಬಿಜೆಪಿ ಬಿಟ್ಟು ಹೋಗಲ್ಲ.5 ವರ್ಷ ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡ್ತೀನಿ.ರಾಜಕೀಯ ನಿವೃತ್ತಿ ಪಡೆಯುತ್ತೆನೋ ಹೊರತು,ಕಾಂಗ್ರೆಸ್ ಸೇರಲ್ಲ.ನನಗೆ ಬೇಡದೆ ಇರುವ ವಿಚಾರದ ಬಗ್ಗೆ ನಾನು ಮಾತನಾಡಲ್ಲ ಎಂದು ಮುನಿರತ್ನ ಹೇಳಿದ್ದಾರೆ.
 
ಯಾರಾದರೂ ಬಿಜೆಪಿ ಬಿಟ್ಟು ಹೋಗ್ತಾರೆ ಎಂದರೆ ನಾನು ತಡೆಯೋಕೆ ಹೋಗದಲ್ಲ.ಅವರಿಗೆ ಒಳ್ಳೆಯದು ಆಗ್ತದೆ ಆಗಿದ್ದೆ ಅಂದರೆ ಹೋಗಲಿ.ಪರಮೇಶ್ವರ ಹೇಳಿದ್ದಾರಲ್ಲ ಲಾಸ್ಟ್ ಬೆಂಚ್ ಕೊಡ್ತೇವೆ ಎಂದು ಹೋಗಲಿ ಲಾಸ್ಟ್ ಬೆಂಚ್ ಗೆ,ನಾವು ಬಿಜೆಪಿಯಲ್ಲಿ ಮೊದಲ ಬೆಂಚ್ ನಲ್ಲಿ ಇದ್ದೇವೆ.ಕಾಂಗ್ರೆಸ್ ಹೋಗಿ ಲಾಸ್ಟ್ ಬೆಂಚ್ ಲ್ಲಿ ಕುಳಿತರೆ ಮೊದಲ ಬೆಂಚ್ ಬರೋಕೆ ಇನ್ನೂ 20 ವರ್ಷ ಆಗಲಿದೆ.ಅಲ್ಲಿಗೆ 85 ವರ್ಷ ಆಗುತ್ತದೆ.ಈಗಾಗಲೇ ಕೆಲವರಿಗೆ 65 ವರ್ಷ ಆಗಿದೆ ಎಂದು ಮುನಿರತ್ನ ವ್ಯಂಗ್ಯವಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಆದೇಶಕ್ಕೆ ಜನ ಡೋಂಟ್ ಕೇರ್