Select Your Language

Notifications

webdunia
webdunia
webdunia
webdunia

ಇದಕ್ಕೆಲ್ಲಾ ಕಾಂಗ್ರೆಸ್ ಪಕ್ಷವೇ ಜವಾಬ್ದಾರಿ

Congress Party
bangalore , ಶುಕ್ರವಾರ, 11 ಆಗಸ್ಟ್ 2023 (15:49 IST)
ಮಾಜಿ ಸಚಿವ ಗೋಪಾಲಯ್ಯ ಗುತ್ತಿಗೆದಾರರ ಕುರಿತು‌ ಸುದ್ದಿಗೋಷ್ಠಿ ನಡೆಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂತರ ನಾಚಿಕೆಗೇಡಿನ ವಿಷಯ. ಮೊದಲ ಬಾರಿಗೆ ರಾಜ್ಯಪಾಲರಿಗೆ ಗುತ್ತಿಗೆದಾರರು ದೂರು ಕೊಟ್ಟಿದ್ದಾರೆ. ಕಳೆದ 85 ದಿನಗಳಿಂದ ಒಂದಲ್ಲ ಒಂದು ದುರ್ಘಟನೆ ನಡೆಯುತ್ತಲೇ ಇದೆ. ಇದಕ್ಕೆಲ್ಲಾ ಕಾಂಗ್ರೆಸ್ ಪಕ್ಷವೇ ಸಂಪೂರ್ಣ ಜವಾಬ್ದಾರಿ. ಕಾಮಗಾರಿ ಮಾಡಿದ ಗುತ್ತಿಗೆದಾರರರು ಇತಿಹಾಸದಲ್ಲೇ ರಾಜ್ಯಪಾಲರಿಗೆ ದೂರು ಕೊಟ್ಟಿರಲಿಲ್ಲ. ಅವರು ಮಾಡಿದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡೋಕೆ ಏನೆಂದು ಡಿಸಿಎಂಗೆ ನಾನು ಪ್ರಶ್ನೆ ಮಾಡ್ತೀನಿ. ಇದರಲ್ಲಿ ಸಿಎಂ ಸಿದ್ದರಾಮಯ್ಯ ದುರ್ಬಲರಾಗಿದ್ದಾರೆ ಎಂದು ಟೀಕಿಸಿದ್ರು. ಮಾಜಿ ಸಚಿವ ಗೋಪಾಲಯ್ಯನವರಿಗೆ ಮಾಜಿ ಸಚಿವ ಅಶ್ವತ್ಥ್ ನಾರಾಯಣ್, ಬಿಬಿಎಂಪಿ ಮಾಜಿ ಡೆಪ್ಯುಟಿ ಮೇಯರ್ ಹೇಮಲತಾ ಸಾಥ್ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗುತ್ತಿಗೆದಾರರು ಪಾಪ ರಾಜ್ಯಪಾಲರನ್ನ ಭೇಟಿ ಆಗಿದ್ದಾರೆ-ಡಿಸಿಎಂ ಡಿಕೆಶಿ