Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಮಧ್ಯ ಪ್ರವೇಶಿಸುವ ಇಚ್ಛಾಶಕ್ತಿ ಇಲ್ಲ- ಮಾಜಿ ಸಿಎಂ ಬೊಮ್ಮಯಿ

ರಾಹುಲ್ ಗಾಂಧಿ ಮಧ್ಯ ಪ್ರವೇಶಿಸುವ ಇಚ್ಛಾಶಕ್ತಿ ಇಲ್ಲ- ಮಾಜಿ ಸಿಎಂ ಬೊಮ್ಮಯಿ
bangalore , ಶುಕ್ರವಾರ, 11 ಆಗಸ್ಟ್ 2023 (14:46 IST)
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಬಿಜೆಪಿ ಸಮಯದಲ್ಲಿ ಹಣ ಬಿಡುಗಡೆ ಆಗಿಲ್ಲ ಎಂಬ  ಡಿ.ಕೆ. ಶಿವಕುಮಾರ್ ಆರೋಪವಾಗಿ ವಿಚಾರವಾಗಿ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ದಾರೆ.
 
ಸರ್ಕಾರ ಏನೇನು ಮಾಡಿದೆ ಎನ್ನುವುದು ಕಾಂಟ್ರ್ಯಾಕ್ಟರ್ ಗಳಿಗೇ ಗೊತ್ತಿದೆ.ಹಣವನ್ನು ಹಿಡಿದುಕೊಂಡಿರುವುದರಿಂದ ಅನುಮಾನಗಳು ಹೆಚ್ಚುತ್ತವೆ.ಹಣ ಬಿಡುಗಡೆ ಮಾಡಿಬಿಟ್ಟಿದ್ದರೆ ಅನುಮಾನವೇ ಇರುತ್ತಿರಲಿಲ್ಲ.ಕೆಂಪಣ್ಣ ಕ್ಲೀನ್‌ಚಿಟ್ ಕುರಿತು,ಈ‌ಹಿಂದೆ ಇದೇ ಕೆಂಪಣ್ಣ ಆರೋಪ ಮಾಡಿದ್ದರು.ಕಾಂಟ್ರ್ಯಾಕ್ಟರ್‌ಗಳೇ ಆರೋಪ ಮಾಡುತ್ತಿದ್ದಾರೆ.ನೀವು ಯುಟರ್ನ್ ಮಾಡಿದರೆ, ಕ್ಲೀನ್‌ಚಿಟ್ ಕೊಟ್ಟರೆ ಬಿಲ್ ಸಿಗುತ್ತದಾ?ಸರಿಯಾಗಿ ಕೆಲಸಮಾಡಿದ ಕಾಂಟ್ರ್ಯಾಕ್ಟರ್‌ಗಳಿಗೆ ಹಣ ಸಿಗದ ಕಾರಣಕ್ಕೆ ರಾಜ್ಯಪಾಲರ ಬಳಿ ಹೋಗಿದ್ದಾರೆ.ಮೂರ್ನಾಲ್ಕು ತಿಂಗಳಲ್ಲಿ ಸಂಗ್ರಹ ಮಾಡಿದ ಬಿಬಿಎಂಪಿ ಹಣವನ್ನೂ ಕೊಡುತ್ತಿಲ್ಲ.ಸರ್ಕಾರದ ಹಣವನ್ನೂ ಕೊಡುತ್ತಿಲ್ಲ.ಕಾಂಟ್ರ್ಯಾಕ್ಟರ್‌ಗಳು ದಯಾಮರಣ ಕೋರುವ ಸಂದರ್ಭ ಇಲ್ಲಿವರೆಗೆ ಬಂದಿರಲಿಲ್ಲರಾಹುಲ್ ಗಾಂಧಿ ಮಧ್ಯ ಪ್ರವೇಶಿಸುವ ಇಚ್ಛಾಶಕ್ತಿ ಇಲ್ಲ.ಹಾಗಾಗಿ ಇದು ಎಟಿಎಂ ಸರ್ಕಾರ ಎನ್ನುವುದು ನಿಜವಾಗುತ್ತದೆ ಅಂತಾ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.
 
ಅಂದು ವಿಧಾನಸೌಧದಲ್ಲಿ ಕಿವಿ ಮೇಲೆ ಹೂ ಇಟ್ಟುಕೊಂಡಿದ್ದಿರಿ, ಈಗ ಜನರ ಕಿವಿ ಮೇಕೆ ಹೂ ಇಡುತ್ತಿದ್ದೀರಿ.ಬಿಬಿಎಂಪಿ ಬಿಲ್ ಬಾಕಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ನಾವು ಆನ್‌ಲೈನ್ ಮಾಡಿದ್ದರಿಂದ ವ್ಯವಸ್ಥೆ ದಾರಿಗೆ ಬರುತ್ತಿತ್ತು.ಹಣ‌ ಬಿಡುಗಡೆ ಕೂಡಲೇ ಮಾಡಬೇಕು, ಇದಕ್ಕಿಂತ ಗಡುವು ನೀಡುವ ಅಗತ್ಯವಿಲ್ಲ.ಈಗಾಗಲೆ ಮೂರು ತಿಂಗಳು ತಡವಾಗಿದೆ.ಇದರ ಬಗ್ಗೆ ಅನೇಕ ಕಾನೂನು ತೊಡಕುಗಳೂ ಇವೆ,ಕಾನೂನು ಹೋರಾಟ ಸಹ ಮಾಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

NIA ದಾಳಿ ವೇಳೆ ಬೆಂಗಳೂರಿನಲ್ಲಿ ಅಕ್ರಮ ವಲಸಿಗರು ಪತ್ತೆ