Select Your Language

Notifications

webdunia
webdunia
webdunia
webdunia

NIA ದಾಳಿ ವೇಳೆ ಬೆಂಗಳೂರಿನಲ್ಲಿ ಅಕ್ರಮ ವಲಸಿಗರು ಪತ್ತೆ

NIA ದಾಳಿ ವೇಳೆ ಬೆಂಗಳೂರಿನಲ್ಲಿ ಅಕ್ರಮ ವಲಸಿಗರು ಪತ್ತೆ
ಬೆಂಗಳೂರು , ಶುಕ್ರವಾರ, 11 ಆಗಸ್ಟ್ 2023 (14:04 IST)
ಬೆಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ವೇಳೆ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದಾರೆ. ಪ್ರಕರಣವೊಂದರ ಸಂಬಂಧ ಬೆಂಗಳೂರಿಗೆ ಭೇಟಿ ನೀಡಿದ್ದ ಎನ್ಐಎ, ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿದೆ.
 
ಈ ವೇಳೆ ಬಾಂಗ್ಲಾದ ಮೂವರು ಪ್ರಜೆಗಳು ಅಕ್ರಮವಾಗಿ ನೆಲೆಸಿರುವುದು ಮಾಹಿತಿ ಪತ್ತೆಯಾಗಿದೆ. ಅಕ್ರಮ ಬಾಂಗ್ಲಾ ವಲಸಿಗರಾದ ಖಲೀಲ್ ಚಪರಾಸಿ, ಅಬ್ದುಲ್ ಖಾದಿರ್, ಮೊಹಮ್ಮದ್ ಜಾಹಿದ್ ಎನ್ನುವವರನ್ನು ಎನ್ಐಎ ಅಧಿಕಾರಿಗಳು ಹಿಡಿದು ಬೆಳ್ಳಂದೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಈ ಸಂಬಂಧ ಬೆಳ್ಳಂದೂರು ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆಗೊಳಪಸಿಡಿದ್ದಾರೆ.

ಕರ್ನಾಟಕದಲ್ಲಿ ಸುಮಾರು 3 ಲಕ್ಷ ಬಾಂಗ್ಲಾ ವಲಸಿಗರು  ಅಕ್ರಮವಾಗಿ ಇರುವುದು ಪತ್ತೆಯಾಗಿದ್ದು, ಬೆಂಗಳೂರು ನಗರ, ಹೊರವಲಯದಲ್ಲೇ ಸುಮಾರು 2 ಲಕ್ಷ ವಲಸಿಗರು ಇದ್ದಾರೆ ಎಂದು ಹೇಳಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಪಿಗಳಿಗೆ ಸರ್ಕಾರಿ ಉದ್ಯೋಗ ಕಟ್: ಅಶೋಕ್ ಗೆಹ್ಲೋಟ್