Select Your Language

Notifications

webdunia
webdunia
webdunia
webdunia

ಭ್ರಷ್ಟರಿಗೆ ಶಾಕ್! ಬೆಂಗಳೂರಿನ 45 ಕಡೆ ಏಕಕಾಲದಲ್ಲಿ ದಾಳಿ

ಲೋಕಾಯುಕ್ತ
ಬೆಂಗಳೂರು , ಶುಕ್ರವಾರ, 4 ಆಗಸ್ಟ್ 2023 (07:50 IST)
ಬೆಂಗಳೂರು : ಲೋಕಾಯುಕ್ತ ಭಾರೀ ದಾಳಿ ನಡೆಸಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಆರ್ ಒ, ಎಆರ್ ಒ, ಎಡಿಟಿಪಿ ಕಚೇರಿಗಳ ಮೇಲೆ ದಿನದ ಅಂತ್ಯದ ಹೊತ್ತಿಗೆ ಏಕಕಾಲದಲ್ಲಿ ರೇಡ್ ಮಾಡಿದೆ.
 
ಆರ್ಪಿಸಿ ಲೇಔಟ್, ಬ್ಯಾಟರಾಯನಪುರ, ಮಲ್ಲೇಶ್ವರಂನ ಕಂದಾಯ ಕಚೇರಿ, ಟೌನ್ ಪ್ಲಾನಿಂಗ್ ಕಚೇರಿ, ಯಟಿಲಿಟಿ ಬಿಲ್ಡಿಂಗ್ನಲ್ಲಿರುವ ಕಂದಾಯ ಕಚೇರಿ ಸೇರಿ ಒಟ್ಟು 45 ಕಡೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅಧಿಕಾರಿಗಳು, ಸಿಬ್ಬಂದಿಯನ್ನು ಕಚೇರಿಯಲ್ಲಿಯೇ ಇರಿಸಿಕೊಂಡು ಶೋಧ ಕಾರ್ಯ ನಡೆಸಿದ್ದಾರೆ.

ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ದಾಳಿಯ ನೇತೃತ್ವ ವಹಿಸಿದ್ದಾರೆ. ವಿಜಯನಗರ, ರಾಜಾಜಿನಗರ ಕಂದಾಯ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಬಲ್ ಸೆಂಚುರಿ ದಾಟಿದ ಟೊಮೆಟೋ ಬೆಲೆ!