Select Your Language

Notifications

webdunia
webdunia
webdunia
webdunia

ಎಕ್ಸ್​ಪ್ರೆಸ್ ಹೈವೇಯಲ್ಲಿ 2ನೇ ದಿನವೂ ಕಾರ್ಯಾಚರಣೆ

express highway
bangalore , ಗುರುವಾರ, 3 ಆಗಸ್ಟ್ 2023 (20:00 IST)
ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್ ಹೈವೆಯಲ್ಲಿ ದ್ವಿಚಕ್ರ, ತ್ರಿಚಕ್ರ, ಟ್ರ್ಯಾಕ್ಟರ್ ಮುಂತಾದ ವಾಹನಗಳಿಗೆ ನಿಷೇಧ ಹೇರಲಾಗಿತ್ತು. ಈ ಹಿನ್ನೆಲೆ ಎರಡನೇ ದಿನವೂ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. ದಶಪಥ ಹೆದ್ದಾರಿಗೆ ನಿಷೇಧಿತ ವಾಹನಗಳು ಎಂಟ್ರಿ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘಿಸಿ ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ಬೈಕ್ ಸವಾರರಿಗೆ ದಂಡದ ಬಿಸಿ ಹೆಚ್ಚಾಗಲಿದ್ದು, ರಾಮನಗರ ಜಿಲ್ಲಾ ವ್ಯಾಪ್ತಿಯ ಎಲ್ಲಾ ಎಂಟ್ರಿ ಎಕ್ಸಿಟ್​ಗಳ ಬಳಿ ಕಾರ್ಯಾಚರಣೆ ನಡೆಸಲಾಗಿದೆ. ಬಹುತೇಕ ದ್ವಿಚಕ್ರ , ತ್ರಿಚಕ್ರ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿವೆ. ಹೈವೆಗೆ ಎಂಟ್ರಿ ಕೊಟ್ಟಿದ್ದ ನಿಷೇಧಿತ ವಾಹನಗಳಿಗೆ ನಿನ್ನೆ ಒಂದೇ ದಿನಕ್ಕೆ 137 ಕೇಸ್ ದಾಖಲಿಸಿ 68,950 ರೂಪಾಯಿ ದಂಡ ವಿಧಿಸಲಾಗಿದೆ. ಸದ್ಯ ಎರಡನೇ ದಿನ ದಶಪಥ ಹೆದ್ದಾರಿಯಲ್ಲಿ ನಿಷೇಧಿತ ವಾಹನಗಳ ಸಂಚಾರ ತಗ್ಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀರಿನ ಹೊಂಡಕ್ಕೆ ಬಿದ್ದು ಬಾಲಕಿ ಸಾವು