Publish Date: Thu, 03 Aug 2023 (15:02 IST)
Updated Date: Thu, 03 Aug 2023 (15:05 IST)
ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತು. ಇದು ಕೂಡ ನ್ಯಾಷನಲ್ ಲೆವೆಲ್ ನಲ್ಲಿ ಸೌಂಡ್ ಮಾಡಿತ್ತು, ರಸ್ತೆ ಅಪಘಾತಗಳಿಗೆ ಕಾರಣ ಏನು ಎಂಬುದರ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಯ್ತು, ಇದರ ಬೆನ್ನಲೇ ಸುರಕ್ಷತೆಗೆ, ಮುಂಜಾಗ್ರತ ಕ್ರಮ ಕೈಗೊಂಡಿದ್ದ ಪೊಲೀಸ್ ಇಲಾಖೆ ಇದೀಗ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ, ಸಂಭವಿಸುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.ಇದೀಗ ಬೆಂಗಳೂರು-ಪುಣೆ ಹೈವೆಯಲ್ಲಿ ಅಧಿಕವಾಗುತ್ತಿರುವ ಅಪಘಾತಗಳನ್ನ ನಿಯಂತ್ರಣ ತರಲು ಅಲೋಕ್ ಕುಮಾರ್ ಅವರು ಅಡಕಮಾರನಹಳ್ಳಿ ಬಳಿ ಹೈವೆ ಪರಿಶೀಲಿಸಿದರು.
ಟೋಲ್ ಯಾವ ರೀತಿ ನಿರ್ವಹಿಸಲಾಗುತ್ತಿದೆ ? ಕ್ಯಾಮರ ಕಾರ್ಯನಿರ್ವಹಿಸುತ್ತಿದೆಯಾ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಇತ್ತೀಚೆಗೆ ಬೆಂಗಳೂರು ಗ್ರಾಮಾಂತರದಲ್ಲಿ ಹೆಚ್ಚು ಅಪಘಾತ ಆಗುತ್ತಿವೆ. ಕಳೆದ ತಿಂಗಳಲ್ಲಿ 49 ಅಪಘಾತಗಳು ಸಂಭವಿಸುವ ಮೂಲಕ ರಾಜ್ಯದಲ್ಲಿ ಎರಡನೇ ಸ್ಥಾನ ಬಂದಿದೆ. ಅಪಘಾತ ಹೆಚ್ಚಳಕ್ಕೆ ಏನು ಕಾರಣ ಎಂಬುದಕ್ಕೆ ಪರಿಶೀಲಿಸಲನೆ ನಡೆಸಿದ್ರು.
ಇನ್ನೂ ನೆಲಮಂಗಲ-ತುಮಕೂರು ಮಧ್ಯೆ ಸಾಕಷ್ಟು ಅಪಘಾತಗಳು ಆಗುತ್ತಿವೆ. ಹೈ ರೆಸ್ಯೂಲೇಷನ್ ಕ್ಯಾಮೆರಾಗಳು ಅಳವಡಿಸಲಾಗಿದೆ. ಅವು ಹೇಗೆ ಕಾರ್ಯ ನಿರ್ವಹಿಸಲಾಗುತ್ತೆ ಅಂತಾ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಒಂದಷ್ಟು ಸಮಸ್ಯೆಗಳಿವೆ ಅದರ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲಲ್ಲಿ ರ್ಯಾಂಪ್ ಗಳನ್ನ ಅಳವಡಿಸುವುದಕ್ಕೆ ಸೂಚನೆ ನೀಡಿದ್ದೇನೆ. ಮೇಲುಸೇತುವೆ ಬಳಿ 50 ಮೀಟರ್ ಅಂತರದಲ್ಲಿ ಸೂಚನಾಫಲಕ ಹಾಕಲು ತಿಳಿಸಲಾಗಿದೆ. ಅದರ ಟೋಲ್ ಗಳ ಬಳಿ ಏನು ಸಮಸ್ಯೆ ಆಗ್ತಿದೆ ಅದ್ರ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು .ಮೈಸೂರು ಎಕ್ಸ್ ಪ್ರೆಸ್ ಹೈ ವೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾದರಿಂದ ರಾಜ್ಯದ ಪ್ರಮುಖ ಹೈ ವೆಗಳಲ್ಲಿ ಅಪಘಾತ ಗಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಿದೆ.