Select Your Language

Notifications

webdunia
webdunia
webdunia
webdunia

ಬೇಡಿಕೆ ಈಡೇರಿಸುವಂತೆ ಬೀದಿಗಿಳಿದ ಡಯಾಲಿಸಿಸ್ ನೌಕರರು...!

Dialysis workers
bangalore , ಗುರುವಾರ, 3 ಆಗಸ್ಟ್ 2023 (14:46 IST)
ಪ್ರತಿನಿತ್ಯ ನೂರಾರು ಮಂದಿಗೆ ಡೈಯಲಿಸಿಸ್ ಮಾಡಿ ಪ್ರಾಣಾ ಉಳಿಸುತ್ತಿದ್ದ ಡೈಯಾಲಿಸಿಸ್ ಸಿಬ್ಬಂದಿ ಇಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫ್ರೀಡಂಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನೂ..ರಾಜ್ಯದಾದ್ಯಂತ ಎಲ್ಲಾ ಡಯಾಲಿಸಿಸ್ ಸಿಬ್ಬಂದಿಗಳು ಮುಷ್ಕರಕ್ಕೆ ಮುಂದಾಗಿದ್ದು, ನಮ್ಮ ಬೇಡಿಕೆಗಳು ಈಡೇರುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಇನ್ನು ಒಂದೆಡೆ ರೋಗಿಗಳಿಗೆ ಇದು ತೀರ ಆತಂಕ ಹೆಚ್ಚಿಸಿದೆ,ರೋಗಿಗಳಿಗೆ ಮಾತ್ರವಲ್ಲದೇ ಆರೋಗ್ಯ ಇಲಾಖೆ ಡಯಾಲಿಸಿಸ್ ನೌಕರರ ಪ್ರತಿಭಟನೆ ಬಿಸಿ ತಟ್ಟಿದ್ದು ಇಂದು ಆರೋಗ್ಯ ಸೌಧದಲ್ಲಿ ಸಭೆ ಕರೆದು ಮುಷ್ಕರ ವಾಪಸ್ ಪಡೆಯುವಂತೆ ಚರ್ಚೆ ನಡೆಸಲಾಯಿತು. ಮೊದಲ ಹಂತದ ಚರ್ಚೆಯಲ್ ಯಾವುದೇ ರೀತಿಯ ಸಂಧಾನಕ್ಕೆ ಒಪ್ಪದ ನೌಕರರು  ತಮ್ಮ ಬೇಡಿಕೆ ಈಡೇರುವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲಾ ಎಂದು ಪಟ್ಟು ಹಿಡಿದ್ರು.

ಇನ್ನೂ ಸಿಬ್ಬಂದಿಗಳಿಗೆ ಮೂರು ತಿಂಗಳಿಂದ ಯಾವುದೇ ವೇತನ ನೀಡಿಲ್ಲ, ಹಾಗೇ ಸಂಜೀವಿನಿ ಸಂಸ್ಥೆಗೆ  ಟೆಂಡರ್ ನೀಡಿದ್ದು ಮೊದಲು ಬರುತ್ತಿದ್ದ ಸಂಬಳದಲ್ಲಿ 50 ಶೇಕಾಡದಷ್ಟು  ಕಡಿತಗೊಳಿಸಿ ಕೇವಲ 69೦೦ ರೂ ಸಂಬಳ ನೀಡುತಿರೋದು ನೌಕರರನ್ನು ಕೆರಳಿಸಿದೆ, ಬೇರೆ ಜೀವಗಳನ್ನು ಉಳಿಸಿದಾಗ ನಮ್ಮ ಕುಟುಂಬದವರು ಎಂದು ಬಾವಿಸೋ ನಮಗೆ ನಮ್ಮ ಕುಂಟುಂಬ ನಡೆಸಲು, ಜೀವನ ಸಾಗಿಸಲು ಸಾಧ್ಯವಾಗಿತ್ತಿಲ್ಲಾ ಎಂದು ಕಿಡಿ ಕಾರಿದ್ರು. ಹಿಂದೆ ಟೆಂಟರ್ ಪಡೆದ ಸಂಸ್ಥೆ ನೀಡುತ್ತಿದ್ದ  ಇಎಸ್ಐ, ಪಿಎಫ್ ಕೂಡ ಹೊಸ ಟೆಂಡರ್ ಪಡೆದ ಸಂಸ್ಥೆ ಮಣ್ಣು ಹಾಕಿದೆ.ಇದರಿಂದಾಗಿ  ಕೇವಲ ಕಂಪನಿ ಲಾಭ ಮಾಡಿಕೊಳ್ಳುತ್ತಿದ್ದು . ನೌಕರರ ಹೊಟ್ಟೆ ಮೇಲೆ ಹೊಟ್ಟೆಯ ಮೇಲೆ ಹೊಡೆದು ಮೋಸ ಮಾಡುತ್ತಿದೆ ಎಂದು ಅಕ್ರೋಶ ವ್ಯಕ್ತ ಪಡಿಸಿದ್ರು. ಇನ್ನೂ ಆರೋಗ್ಯ ಇಲಾಖೆ ಡಯಾಲಿಸಿಸ್ ಸಿಬ್ಬಂದಿ ಜೊತೆ ಮಾತುಕತೆ ನಡೆಸುತ್ತಿದ್ದು ಆದರೆ ಸಿಬ್ಬಂದಿಗಳ ಯಾವುದೇ ಬೇಡಿಕೆಗಳು ಈಡೇರುವ ಲಕ್ಷಣಗಳು ಕಂಡು ಬರದೆ ಇರುವ ಹಿನ್ನೆಲೆ ಪ್ರತಿಭಟನೆ ಮುಂದಿನ ಹಂತವನ್ನು ತಲುಪುವ ರೀತಿ ಕಂಡು ಬರುತ್ತಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ರಾಮ ಮಂದಿರ ನಿರ್ಮಾಣ ಗುತ್ತಿಗೆ ಮುಸ್ಲಿಂ ವ್ಯಕ್ತಿಗೆ ನೀಡಿದಕ್ಕೆ ಆಕ್ರೋಶ