Select Your Language

Notifications

webdunia
webdunia
webdunia
webdunia

ರಾಮ ಮಂದಿರ ನಿರ್ಮಾಣ ಗುತ್ತಿಗೆ ಮುಸ್ಲಿಂ ವ್ಯಕ್ತಿಗೆ ನೀಡಿದಕ್ಕೆ ಆಕ್ರೋಶ

ರಾಮ ಮಂದಿರ ನಿರ್ಮಾಣ ಗುತ್ತಿಗೆ ಮುಸ್ಲಿಂ ವ್ಯಕ್ತಿಗೆ ನೀಡಿದಕ್ಕೆ ಆಕ್ರೋಶ
bangalore , ಗುರುವಾರ, 3 ಆಗಸ್ಟ್ 2023 (14:24 IST)
ಅಯೋಧ್ಯೆಯಲ್ಲಿ ಹಿಂದೂಗಳ ಬಹು ವರ್ಷದ ಕನಸಿನ ಕುಸಾಗಿರುವ  ರಾಮ ಮಂದಿರ ನಿರ್ಮಾಣ ಅದ್ದೂರಿಯಿಂದ ಸಾಗುತ್ತಿದೆ. ರಾಮ ಮಂದಿರಕ್ಕಾಗಿ ಕಳೆದ 500 ವರ್ಷಗಳ ನಿರಂತರ ಹೋರಾಟವಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆರಂಭವಾಗುವವರೆಗೆ ರಾಮಮಂದಿರ ವಿಚಾರವಾಗಿ ಅನೇಕ ಘಟನೆಗಳು ಹೊರಾಟ ನಡೆದಿವೆ. ಇದೆ ವಿಆರವಾಗಿ ಮುಸ್ಲಿಂ ಸಮುದಾಯ ಇದು ಬಾಬರ್‌ನ ಮಸೀದಿ ಎಂದು ಕೋರ್ಟ್‌ ಮೂರೆ ಹೊಗಿತ್ತು. ಸುದೀರ್ಘ ಹೋರಾಟದ ಬಳಿಕ ಸುಪ್ರೀಂ ಕೋರ್ಟ್‌ನಿಂದ 2019ರಲ್ಲಿ ಹಿಂದೂಗಳ ಪರವಾಗಿ ತೀರ್ಪು ನೀಡಿದೆ. ಹಿಂದೂಗಳ ಬಹು ವರ್ಷದ ಕನಸಿನ ಕುಸಾಗಿರುವ  ರಾಮಮಂದಿರ ನಿರ್ಮಾಣವನ್ನ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ ಕಾರ್ಯ ಅದ್ದೂರಿಯಾಗಿ  ನಡೆಯುತ್ತಿದೆ. ಇದರ ಮಧ್ಯ ಇದೀಗ ಮತ್ತೊಂದು ವಿವಾದ ಎದಿದ್ದು ರಾಮಮಮಂದಿರ ನಿರ್ಮಾಣದ ಗುತ್ತಿಗೆಯನ್ನು ಆಡಳಿತ ಮಂಡಳಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸುತ್ತಿವೆ.

ಇನ್ನೂ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕೂದಕ್ಕೆ ವಿರೋದ ವ್ಯಕ್ತಪಡಿಸಿದ್ದು, ಇಂದು ಬೆಂಗಳೂರಿನ ಪ್ರಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಮಮಂದಿರ ನಿರ್ಮಾಣದ ಗುತ್ತಿಗೆಯನ್ನು ರಾಜಸ್ತಾನ ಮೂಲದ ಇಕ್ಬಾಲ್ ಮಿಸ್ತ್ರಿ ಎಂಬಾತನ ಕಂಪನಿಗೆ ದೇವಸ್ಥಾನ ನಿರ್ಮಾಣದ ಗುತ್ತಿಗೆ ನೀಡಿದ್ದು, ಈ ಮೂಲಕ ರಾಮಮಂದಿರ ಟ್ರಸ್ಟ್ ಆಡಳಿತ ಮಂಡಳಿ ದೇಶದ ನೂರು ಕೋಟಿ ಹಿಂದೂಗಳಿಗೆ ಅವಮಾನ ಮಾಡಿದೆ. ಅಲ್ಲಾ ಒಬ್ಬನೆ ದೇವರು.. ಎನ್ನುವವರಿಗೆ ರಾಮನ ಗುಡಿ ನಿರ್ಮಾಣಕ್ಕೆ ಅವಕಾಶ ಹೇಗೆ ನೀಡಿದರು? ಗೋ ಮಾಂಸ ಭಕ್ಷಕರು ಹಾಗೂ ಹಿಂದೂ ದೇವರನ್ನ ನಂಬದವರಿಗೆ ಗುತ್ತಿಗೆ ಹೇಗೆ ಕೊಟ್ಟಿದ್ದೀರಿ? ಅವರನ್ನು ಕೂಡಲೇ ಅಲ್ಲಿಂದ ವಾಪಸ್ ಕಳಿಸಬೇಕು. ದೇವಸ್ಥಾನ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಮುಸ್ಲಿಂ ಕೆಲಸಗಾರರನ್ನು ಹೊರಹಾಕಬೇಕು. ಬಳಿಕ ನಾವು ಅಲ್ಲಿಗೆ ತೆರಳಿ ಶುದ್ದೀಕರಣ ಮಾಡ್ತೇವೆ. ರಾಮಮಂದಿರ ಟ್ರಸ್ಟಿಗಳಲ್ಲಿ ಒಬ್ಬರಾದ ಪೇಜಾವರ ಶ್ರೀಗಳಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ.ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ವಿರುದ್ಧ ಉಗ್ರಪ್ಪ ವಾಗ್ದಾಳಿ