Select Your Language

Notifications

webdunia
webdunia
webdunia
webdunia

ಕಳ್ಳರನ ಹಿಡಿಯಲು ಬಂದಾಗ ರಾಡ್ ತೋರಿಸಿ ಬೆದರಿಕೆ

ಕಳ್ಳರನ ಹಿಡಿಯಲು  ಬಂದಾಗ ರಾಡ್ ತೋರಿಸಿ ಬೆದರಿಕೆ
bangalore , ಗುರುವಾರ, 3 ಆಗಸ್ಟ್ 2023 (13:19 IST)
ಬೆಂಗಳೂರು ಎಷ್ಟು ಸೇಫ್‌ ಎಂಬ ಪ್ರಶ್ನೆ ಮತ್ತೆ ಮತ್ತೆ ಕೇಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಕಂಟ್ರೋಲ್‌ ಆಗದೆ ಇರುವಷ್ಟು ಕ್ರೈಂ ಹೆಚ್ಚಾಗಿದ್ಯಾ ಎಂಬ ಅನುಮಾನ ಕೂಡ ಎದುರಾಗಿದೆ. ಮಡಿವಾಳದ ಮಾರುತಿನಗರದಲ್ಲಿ ನಡೆದ ಘಟನೆ ಇದು . ಕೈಯಲ್ಲಿ ಹತಾರಿ ಹಿಡಿದು ಬರುವ ಇಬ್ಬರನ್ನ ಕಂಡು ನಿಜಕ್ಕೂ ಅಲ್ಲಿನ ಜನರು ಗಾಬರಿಗೊಂಡಿದ್ದರು . ನೋಡನೊಡುತ್ತಿದ್ದಂತೆ ನೇರವಾಗಿ  ಬೇಕರಿಯೊಂದರ ಬಳಿ ಬರುವ ಓರ್ವ ಅಂಗಡಿ ಬೀಗ ರಾಡ್ ನಿಂದ ಮುರಿದು ಒಳಗೆ ಎಂಟ್ರಿ ಕೊಡ್ತಾನೆ. ಬಳಿಕ ಅಂಗಡಿಯಲ್ಲಿದ್ದ ಕೆಲ ವಸ್ತು, ನಗದು ದೋಚಿ ಹೊರ ಬರ್ತಾನೆ.. ಇದನ್ನೆಲ್ಲಾ ಕಂಡ ಸ್ಥಳೀಯರು ಕಳ್ಳರನ ಹಿಡಿಯಲು ಮುಂದೆ  ಬಂದಾಗ ರಾಡ್‌ ತೋರಿಸಿ ಬೆದರಿಕೆ ಹಾಕಿದ್ರು . ಈ ಮಧ್ಯೆ ಕಳ್ಳತನ ಕೃತ್ಯದ ಬಗ್ಗೆ ಪ್ರಶ್ನೆ ಮಾಡಿದ್ರೆ ಆ ಖದೀಮರು ತಲೆ ಕೆಡಿಸಿಕೊಳ್ಳದೇ ಬೈಕ್ ಏರಿ ಎಸ್ಕೇಪ್ ಆಗ್ತಾರೆ.

ಇನ್ನು ರಾಡ್‌ನಿಂದ ಬಾಗಿಲು ಮೀಟಿ ಬೇಕರಿಯಲ್ಲಿದ್ದ 22 ಸಾವಿರ ನಗದನ್ನ ದೋಚಿದಲ್ಲದೇ ಸಿಗರೇಟ್‌ನ್ನು ಕೂಡ ಕೊಂಡೊಯ್ದಿದ್ದಾರೆ  ಪುಂಡರು.   ಇನ್ನು ಈ ರೀತಿಯ  ಪುಂಡಾಟ ಮಾರುತಿನಗರದಲ್ಲಿ  ಈ ಹಿಂದೆ ಕೂಡ ನಡೆದಿತ್ತು, ಪ್ರತಿ ಅಂಗಡಿಗೂ ಇಂತಹ ಪುಂಡರು ಬಂದು ಈ ರೀತಿಯ ಹಾವಳಿ ಕೊಡ್ತಾರೆ  ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿಲಾಗಿದ್ರೂ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲವಂತೆ . ಪೊಲೀಸ್‌ ಬೀಟ್‌ ಇದ್ದರೂ  ಇಂತವರ ಹಾವಳಿ  ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಪೊಲೀಸರು ಇಂತಹ ಪುಂಡರ ಮೇಲೆ ಕ್ರಮ ಕೈಗೋಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.ಸದ್ಯ ಸಿಸಿಟಿವಿಗಳನ್ನ ಅಧರಿಸಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಈ ಸಂಬಂಧ ಇಂತಹ ಕೆಲ ಪ್ರದೇಶದಲ್ಲಿ ಬೀಟ್‌ಗಳನ್ನ ಹೆಚ್ಚಿಸುವುದಾಗಿ ಪೊಲೀಸರು ಭರವಸೆಯನ್ನೂ ನೀಡಿದ್ದಾರೆ. ಈ ಸಂಬಮಧ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.  


Share this Story:

Follow Webdunia kannada

ಮುಂದಿನ ಸುದ್ದಿ

ಇದೇನಿದು ಇಷ್ಟೊಂದು ಹೀನಾಯ : ಬಾಲಕಿಗೆ ಲೈಂಗಿಕ ಕಿರುಕುಳ, ಸ್ಯಾನಿಟೈಸರ್ ಕುಡಿಸಿ ಹತ್ಯೆಗೈದ ಪುಂಡರ ಗುಂಪು!