Select Your Language

Notifications

webdunia
webdunia
webdunia
webdunia

ಹೊಟ್ಟೆಪಾಡಿಗಾಗಿ ದೇವರ ಮುಕುಟ ಕಳ್ಳತನ..!

ಹೊಟ್ಟೆಪಾಡಿಗಾಗಿ ದೇವರ ಮುಕುಟ ಕಳ್ಳತನ..!
bangalore , ಶುಕ್ರವಾರ, 7 ಜುಲೈ 2023 (18:31 IST)
ಜೂನ್ 28 ರ ರಾತ್ರಿ‌ 9.10 ರ ಸಮಯ.ವಿವಿ ಪುರಂ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ನಂಜಪ್ಪ ಸರ್ಕಲ್ ನಲ್ಲಿರುವ ಕನ್ಯಕಾಪರಮೇಶ್ವರಿ‌ ದೇವಸ್ಥಾನ. ಈ ದೇವಸ್ಥಾನಕ್ಕೆ ಭಕ್ತನ ಸೋಗಿನಲ್ಲಿ ಬಂದಿದ್ದ ಆಸಾಮಿ ರವಿ ನಾಯ್ಡು. ಒಂದೂವರೆ ಕೆಜಿ‌ ತೂಕದ ದೇವರ ಮುಕುಟವನ್ನ ಎಗರಿಸಿ ಎಸ್ಕೇಪ್ ಆಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ವಿವಿ ಪುರಂ ಪೊಲೀಸರು 100 ಸಿಸಿಟಿವಿ ಪರಿಶೀಲನೆ ನಡೆಸಿ  ಆರೋಪಿ ರವಿ ನಾಯ್ಡು ನನ್ನ ಬಂಧಿಸಿದ್ದಾರೆ.. ವಿಪರ್ಯಾಸ ಅಂದ್ರೆ ಇದೇ ರವಿನಾಯ್ಡು 2000 ದಿಂದ 2006 ರ ವರೆಗೆ ಸೈಕಲ್ ನಲ್ಲೆ ವಿಶ್ವಾದ್ಯಂತ ಸುತ್ತಾಡಿ ಏಡ್ಸ್ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸಿದ್ದವನು.

ರವಿ ನಾಯ್ಡು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಆತನ ಸ್ಥಿತಿ ಕಂಡು ಅಯ್ಯೋ ಅನಿಸಿದೆ.. ಸೈಕಲ್ ನಲ್ಲಿ ದೇಶ ವಿದೇಶ ಸುತ್ತಿದ ರವಿ ನಾಯ್ಡುಗೆ ಮಹಾರಾಷ್ಟ್ರದ ಬಾಳಾ ಠಾಕ್ರೆ ಬೈಕ್ ಒಂದನ್ನ ಗಿಫ್ಟ್ ಮಾಡಿದ್ರಂತೆ.. ಹೀಗೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುತ್ಗಾ ಸುತ್ತಾಡುತ್ತಿದ್ದವನಿಗೆ ಊಟಕ್ಕು ಪರದಾಡುವಂತಹ ಸ್ಥಿತಿ ಉಂಟಾಗಿಬಿಟ್ಟಿತ್ತು. ಈತನ ನೆರವಿಗೂ ಯಾರೊಬ್ಬರು ನಿಲ್ಲಲಿಲ್ಲ. ಹಾಗಾಗಿ ಚಿಂದಿ ಆಯುತ್ತಾ ಅದರಿಂದ ಬರುವ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ತಿದ್ದ. ಹೀಗಿದ್ದವನು ಕಳ್ಳತನದ ಹಾದಿ ಹಿಡಿದು ಅಂದರ್ ಆಗಿದ್ದಾನೆ. ಸದ್ಯ ಬಂಧಿತ ರವಿ ನಾಯ್ಡು ನಿಂದ‌ ಒಂದೂವರೆ ಕೆಜಿ ತೂಕದ ಬೆಳ್ಳಿ ದೇವರ ಮುಕುಟ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸ್ತಿದ್ದಾರೆ.ಸದ್ಯ ಆರೋಪಿ ರವಿ ನಾಯ್ಡು ಜೈಲು ಪಾಲಾಗಿದ್ದು ಆತನ ಬಿಡುಗಡೆ ಬಳಿಕ ವಿವಿ ಪುರಂ ಪೊಲೀಸರು ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡು ಊಟ , ವಸತಿ ನೀಡಲು ಮುಂದಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಬಜೆಟ್ ಕರ್ನಾಟಕ ಮಾತ್ರವಲ್ಲ ಡಿಕೆಶಿ ಅವರಿಗೂ ನಿರಾಶೆಯಾಗಿದೆ- ವಿಜಯೇಂದ್ರ