Select Your Language

Notifications

webdunia
webdunia
webdunia
webdunia

ಲೋಕಸಭಾ ಚುನಾವಣೆ ಸಿದ್ದತೆಗೆ ಕಾಂಗ್ರೆಸ್ ಸರ್ವ ಸದಸ್ಯರ ಸಭೆ

ಲೋಕಸಭಾ ಚುನಾವಣೆ ಸಿದ್ದತೆಗೆ ಕಾಂಗ್ರೆಸ್ ಸರ್ವ ಸದಸ್ಯರ ಸಭೆ
bangalore , ಸೋಮವಾರ, 14 ಆಗಸ್ಟ್ 2023 (16:32 IST)
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡು ಯಶಸ್ವಿಯಾಗಿರುವ ಕಾಂಗ್ರೆಸ್ ನಾಯಕರು ಈಗ ಲೋಕಸಭಾ ಚುನಾವಣೆಯಲ್ಲಿ ಪ್ರಾಬಲ್ಯ ತೋರಿಸೋದಕ್ಕೆ ಸಿದ್ದವಾಗ್ತಿದೆ.‌ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಸೇರಿದಂತೆ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡೊದಕ್ಕೆ ಇಂದು ಸರ್ವ ಸದಸ್ಯರ ಸಭೆ ನಡೆಸಲಾಯ್ತು.ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟುಗಳನ್ನ ಗೆಲ್ಲಬೇಕಂತಾ ಕಾಂಗ್ರೆಸ್ ಪಡೆ ಸನ್ನದ್ದವಾಗ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಗೆ ಟಾಂಗ್ ನೀಡಿ ಯಶಸ್ವಿಯಾಗಿರುವ ಕಾಂಗ್ರೆಸ್ ನಾಯಕರು ಇಂದು ಕೆಪಿಸಿಸಿ ನೂತನ ಕಚೇರಿ ಇಂದಿರಾ ಭವನದಲ್ಲಿ ಸರ್ವ ಸದಸ್ಯರ ಸಭೆ ನಡೆಸಲಾಯ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಹಾಗೂ ಕೆಪಿಸಿಸಿ‌ ಅಧ್ಯಕ್ಷರು ಆಗಿರುವ ಡಿಕೆಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಯ್ತು .. ಸಭೆಯಲ್ಲಿ ಸಚಿವರು ಸೇರಿದಂತೆ ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ, ರೆಹಮಾನ್ ಖಾನ್, ಸಲೀಂ ಅಹಮದ್ ಸೇರಿ ಹಲವಾರು ಭಾಗಿಯಾಗಿದ್ರು. ಇನ್ನೂ ಶಾಸಕರು ಸೇರಿದಂತೆ ಜಿಲ್ಲಾ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ಪದಾಧಿಕಾರಿಗಳು, ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರು, ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರು, ಮಾಜಿ ಶಾಸಕರು, ಮಾಜಿ ಸಂಸದರು ಸೇರಿ ಕಾಂಗ್ರೆಸ್ ಎಲ್ಲಾ ಮುಖಂಡರು ಭಾಗಿಯಾಗಿದ್ರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚು ಅಭ್ಯರ್ಥಿಗಳನ್ನ ಆಯ್ಕೆ ಮಾಡಬೇಕಂತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್ ಟೀಮ್ ರೆಡಿಯಾಗ್ತಿದೆ. ಲೋಕಸಭಾ ಚುನಾವಣೆಯಗೆ ಬೂತ್ ಮಟ್ಟದಲ್ಲಿ ಸೇರಿದಂತೆ ವಾರ್ಡ್ ಹಾಗೂ ತಾಲೂಕು ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು, ಗ್ಯಾರಂಟಿ ಯೋಜನೆಗಳನ್ನ ಮನೆ ಮನೆಗೂ ತಲುಪಿಸಬೇಕು ಅಂತಾ ನಾಯಕರಿಗೆ ಕಾರ್ಯಕರ್ತರು ಕರೆ ನೀಡಿದ್ರು ಡಿಸಿಎಂ ಡಿಕೆಶಿವಕುಮಾರ್ ಮುಂದೆ ತಾಲ್ಲೂಕು, ಜಿಲ್ಲಾ ಪಂಚಾಯತಿ ಮತ್ತು ಬಿಬಿಎಂಪಿ ಚುನಾವಣೆ ಇದೆ ಇದು ಮುಂದಿನ ಸವಾಲಾಗಿದೆ ನಮಗೆ.ಬಿಬಿಎಂಪಿ ವಿಚಾರ ಕೋರ್ಟ್ ನಲ್ಲಿ ಇದೆ.ಕೋರ್ಟ್ ಯಾವಾಗ ಏನೂ ಹೇಳಿದ್ರು ನಾವು ಚುನಾವಣೆ ರೆಡಿ ಇರಬೇಕು..ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಮಾಡಿದ್ರು.ಅವರನ್ನ ಐರನ್ ಲೇಗ್ ಅಂತಾ ವ್ಯಂಗ್ಯ ಮಾಡಿದ್ರು, ರಾಹುಲ್ ಗಾಂಧಿ ಓಡಾಟ ನಡೆಸಿದ ಎಲ್ಲ ಕಡೆ ಗೆದಿದ್ದೇವೆ.ವಿರೋಧ ಪಕ್ಷಗಳಿಗೆ ನಮ್ಮ‌ ಅಧಿಕಾರ ಬಂದಾಗಿನಿಂದ ತಡೆದುಕೊಳ್ಳಲು ಆಗ್ತಿಲ್ಲಾ.ನಮ್ಮ ಮೇಲೆ ಕಮಿಷನ್ ಆರೋಪ ಮಾಡಿದ್ದಾರೆ..ಯಾರಿಗೋ ಹೆದರಿಸಿದಂತೆ ಈ ಡಿಕೆ ಶಿವಕುಮಾರ್ ಎದುರಿಸಲು ಆಗುತ್ತಾ. ಕಮಿಷನ್ ವಿಚಾರ ಪ್ರೂ ಮಾಡಿದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಅಂತಾ ಡಿಸಿಎಂ ಡಿಕೆ ಶಿವಕುಮಾರ್ ಸವಾಲಾಕಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಷಪ್ರಾಶನ ಮಾಡಿ ನಾಯಿಗಳ ಮಾರಣಹೋಮ