Select Your Language

Notifications

webdunia
webdunia
webdunia
webdunia

ನಾಳೆ ವಾಹನ ಸವಾರರಿಗೆ ತಟ್ಟಲಿದೆ ಟ್ರಾಫಿಕ್ ಜಾಮ್ ಬಿಸಿ..!

Traffic jam will hit the motorists tomorrow
bangalore , ಬುಧವಾರ, 22 ಫೆಬ್ರವರಿ 2023 (19:46 IST)
ನಾಳೆ ರಾಜ್ಯಕ್ಕೆ ಗೃಹಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ವಾಹನ ಸವಾರರಿಗೆ  ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದೆ.23 ನೇ ತಾರೀಖು ಮಧ್ಯಾಹ್ನದಿಂದ 24 ರ ಮಧ್ಯಾಹ್ನದ ವರೆಗೆ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ.ಸುಗಮ ಸಂಚಾರ ದೃಷ್ಟಿಯಿಂದ ಟ್ರಾಫಿಕ್ ಪೊಲೀಸರಿಂದ ಮುಂಜಾಗೃತ ಕ್ರಮವಹಿಸಲಾಗಿದೆ. 
 
ಸವಾರರಿಗೆ ಸಾಧ್ಯವಾದಷ್ಟು ಪರ್ಯಾಯ ಮಾರ್ಗ ಬಳಸಲು ಪೊಲೀಸರು ಮನವಿ ಮಾಡಿದ್ದು,ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್, ಕಾವೇರಿ ಥಿಯೇಟರ್ ಜಂಕ್ಷನ್, ರೇಸ್ ಕೋರ್ಸ್, ಟೌನ್ ಹಾಲ್, ತಾಜ್ ವೆಸ್ಟ್ ಎಂಡ್, ಲಾಲ್ ಬಾಗ್ ರಸ್ತೆ, ಮಿನರ್ವ್ ಸರ್ಕಲ್, ಜೆಸಿ ರಸ್ತೆ, ಎನ್ ಆರ್ ಸರ್ಕಲ್, ಮೈಸೂರು ಬ್ಯಾಂಕ್ ,ಪ್ಯಾಲೇಸ್ ರಸ್ತೆ, ಸಿಐಡಿ ಜಂಕ್ಷನ್, ಬಸವೇಶ್ವರ ಜಂಕ್ಷನ್, ಅಲಿ ಅಸ್ಕರ್ ರಸ್ತೆ, ಇನ್ ಪ್ಯಾಂಟ್ರಿ ರಸ್ತೆ ಕಾಫಿ ಬೋರ್ಡ್ ಜಂಕ್ಷನ್, ಮಣಿಪಾಲ್ ಜಂಕ್ಷನ್, ಎಂ.ಜಿ ರಸ್ತೆ, ಟ್ರಿನಿಟಿ ಸರ್ಕಲ್ ,ಇಂದಿರಾನಗರ 100 ಮೀ ರಸ್ತೆ, ಕಮಾಂಡ್ ಹಾಸ್ಪಿಟಲ್, ದೊಮ್ಮಲೂರು, ಹೆಚ್ ಎಎಲ್ ಎರ್ ಪೋರ್ಟ್ ರಸ್ತೆ ಯಲ್ಲಿ ವಾಹನ ನಿಲುಗಡೆ ನಿರ್ಬಂಧ ವಿಧಿಸಲಾಗಿದೆ.ಸವಾರರಿಗೆ ಸಾಧ್ಯವಾದಷ್ಟು ಪರ್ಯಾಯಾ ಮಾರ್ಗ ಬಳಸಲು ಪೊಲೀಸರು ಸೂಚನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ವಿಧೇಯಕಗಳು ಅಂಗೀಕಾರ