Select Your Language

Notifications

webdunia
webdunia
webdunia
webdunia

ಲವ್ ಮಾಡು ಅಂತಾ ಪೀಡಿಸುತ್ತಿದ್ದ ಯುವಕ ಪೊಲೀಸರ ಅತಿಥಿ

The young man who was pestering him to make love was a guest of the police
bangalore , ಬುಧವಾರ, 22 ಫೆಬ್ರವರಿ 2023 (18:46 IST)
ಪ್ರತಿಷ್ಠಿತ ಇಸ್ರೋದಲ್ಲಿ ಕೆಲಸ‌ ಮಾಡುತ್ತಿದ್ದ ಯುವತಿ ಹಿಂದೆ ಬಿದ್ದು ಲವ್ ಮಾಡು ಅಂತಾ ಪೀಡಿಸುತ್ತಿದ್ದ ಪಾಗಲ್‌ ಪ್ರೇಮಿ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ಮಾರಿಯಪ್ಪಮ್ ಎಂಬಾತನ ವಿರುದ್ದ ಎಫ್ಐಆರ್ ದಾಖಲಾಗಿದೆ. ಉತ್ತರ ಭಾರತ ಮೂಲದ ಯುವತಿ ಕೆಲ ವರ್ಷಗಳಿಂದ ಇಸ್ರೋ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದರು. ಹೀಗಿರಬೇಕಾದರೆ ಕಳೆದ ವರ್ಷ ಮಾರಿಯಪ್ಪನ್ ಎಂಬಾತ ಹೇಗೋ ಪರಿಚಯಿಸಿಕೊಂಡು ಯುವತಿ ಹಿಂದೆ ಬಿದ್ದಿದ್ದ. ರೋಜ್ ಕೊಟ್ಟು ಲವ್ ಮಾಡು ಪ್ರಪೋಸ್ ಮಾಡಿದ್ದ. ಈತನ ಪ್ರೀತಿ ನಿರಾಕರಿಸಿದ ಯುವತಿಗೆ ಕಿರುಕುಳ ನೀಡಲು‌ ಆರಂಭಿಸಿದ್ದ‌‌.‌ ಈ ಸಂಬಂಧ‌ ನೀಡಿದ‌‌ ದೂರಿನ ಮೇರೆಗೆ ‌ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇರೆಗೆ ಹೊರಬಂದ ಮಾರಿಯಪ್ಪನ್, ಮತ್ತೆ ಐ ಲವ್ ಯು, ಮ್ಯಾರಿ ಮಿ ಎಂದು ಒತ್ತಾಯಿಸಿದ್ದಾನೆ.‌ ಅಲ್ಲದೆ, ಕೆಲಸದಿಂದ ಬರುವಾಗ ಯುವತಿ ಸ್ಕೂಟಿ ಅಡ್ಡಗಟ್ಟಿ ಲವ್ ಮಾಡು ಅಂತಾ ಪೀಡಿಸಿದ್ದಾನೆ ಎಂದು ಇದಕ್ಕೆ ಒಪ್ಪದಿದ್ದಕ್ಕೆ ಸ್ಕೂಟಿಯನ್ನು ಎಳೆದಾಡಿ ಆಕೆ ಹಿಂದೆ ದುಂಬಾಲು ಬಿದ್ದಿದ್ದಾನೆ.‌ ಮಾನಸಿಕ‌ ಕಿರುಕುಳ‌ ನೀಡುತ್ತಿರುವುದಾಗಿ ಆರೋಪಿಸಿ ಜೀವನ್ ಭೀಮಾನಗರ ಪೊಲೀಸರು‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಸ್ನೇಹಿಯಾಗಲಿರುವ ಪೊಲೀಸ್ ಇಲಾಖೆ..!