ಡಿ ರೂಪಾ ಹಾಗೂ ರೋಹಿಣಿ ಸಿಂಧೂರಿ ಕಿತ್ತಾಟ ಪರಿಷತ್ ಕಲಾಪದಲ್ಲಿ ಇಂದು ಪ್ರತಿಧ್ವನಿಸಿದೆ.ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಹೆಚ್.ವಿಶ್ವನಾಥ್ ಅಧಿಕಾರಿಗಳ ಕಥೆ ಧಾರಾವಾಹಿಗಳ ರೀತಿಯಲ್ಲಿ ಪ್ರಸ್ತಾಪ ಆಗುತ್ತಿದೆ.ಮಣಿವಣ್ಣನ್ ಅವರು ಸಂದಾನ ನಡೆಸಿದ್ದು ಎಷ್ಟು ಸರಿ.ಸಿಎಸ್ ಅವರು ಮೌನವಾಗಿಯೇ ಕೂತಿದ್ದಾರೆ.ಕೂಡಲೇ ಇವರನ್ನು ಅಮಾನತು ಮಾಡಬೇಕು.ನೈತಿಕತೆ ಕಳೆದುಕೊಂಡ ನಡೆತೆಗೆಟ್ಟ ಅಧಿಕಾರಿಗಳು ಬೇಕಾ.ಯಾಕೆ ಸಿಎಂ ಇವರನ್ನು ಇನ್ನು ಸ್ಥಾನದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನೇ ಮಾಡಿದರು. ಈ ವೇಳೆ ಇದಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಅಶ್ವಥ್ ನಾರಾಯಣ್ ಕಾನೂನು ಪ್ರಕಾರ ಏನು ಕ್ರಮ ಆಗಬೇಕು ಆಗುತ್ತದೆ.ಬಿಗಿಯಾಗಿ ಕ್ರಮ ವಹಿಸಲು ಸರ್ಕಾರ ಮುಂದಾಗಲಿದೆ.ಈಗಾಗಲೇ ಸ್ಥಳ ನಿಗಧಿ ಮಾಡದೇ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.