Select Your Language

Notifications

webdunia
webdunia
webdunia
webdunia

ಎರಡು ವಿಧೇಯಕಗಳು ಅಂಗೀಕಾರ

ಎರಡು ವಿಧೇಯಕಗಳು ಅಂಗೀಕಾರ
bangalore , ಬುಧವಾರ, 22 ಫೆಬ್ರವರಿ 2023 (19:44 IST)
ವಿಧಾನಸಭೆಯಲ್ಲಿ ಇಂದು ಎರಡು ವಿಧೇಯಕಗಳು ಮಂಡನೆ ಆಗಿ ಅಂಗೀಕಾರವಾದವು.ಬೃಹತ್ ಬೆಂಗಳೂರು ಮಹಾನಗರದ ಪಾಲಿಕೆ ವಿಧೇಯಕ ಮಂಡನೆ ಆಯಿತು ಈ ಬಗ್ಗೆ ಮಾತನಾಡಿದ ಸಚಿವ ಮಾಧುಸ್ವಾಮಿ‌ ಈ ವಿಧಯೇಕದಿಂದ ಬಿ ಖಾತಾ , ಬೆಂಗಳೂರು ಸಿಟಿಯಲ್ಲಿ ಪ್ರಿವಿಲೈಜ್  ಮಾಡಿದ್ದೇವು. ಶೈಕ್ಷಣಿಕ ಸಂಸ್ಥೆಗಳಿಗೆ 25 % ಟ್ಯಾಕ್ಸ್ ಜಾಸ್ತಿ ಮಾಡಿ ಘೋಷಣೆ ಮಾಡಿದ್ವಿ.ಅದನ್ನು ವಾಪಸ್ ಪಡೆಯಲಾಗಿದೆ.ಬಿ ಖಾತಾಗಳಿಗೆ ಬೇರೆ ರಾಜ್ಯಗಳ ಮುನಿಸಿಪಾಲಿಟಿಗಳಲ್ಲಿ ಏನು ರೇಟು ಇದೆ.ಆ ರೇಟುಗೆ ಒತ್ತುವರಿ ಮಾಡಲು ತಿದ್ದುಪಡಿ.ಬೆಂಗಳೂರು ಒಂದರಲ್ಲಿ ಬಿ ಖಾತಾಗೆ ಪೆನಾಲಿಟಿ ಹಾಕುತ್ತಿದ್ದೇವು. ಅದನ್ನ ವಿತ್ ಡ್ರಾ ಮಾಡ್ತಾ ಇದೇವಿ ಎಂದು ಹೇಳಿದರು . ಇನ್ನೂ ಕಾರ್ಖಾನೆಗಳ ಕರ್ನಾಟಕ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದ್ದು ಈ ಬಗ್ಗೆ ತಿಳಿಸಿದ ಸಚಿವ ಮಾಧುಸ್ವಾಮಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಟೈಮ್ ಲಿಮಿಟ್ ಮಾಡಿದ್ವಿ. ಕೆಲ ಕಡೆಗಳಿಂದ ಒತ್ತಡ ಬಂದಿದೆ.ಆದ್ದರಿಂದ ವರ್ಕಿಂಗ್ ಅವರ್ಸ್ ಹೆಚ್ಚು ಮಾಡಿಕೊಳ್ಳಬಹುದು. ವಾರದ 4 ದಿನಗಳಲ್ಲಿ 48 ಗಂಟೆಗೆ ಕೆಲಸ ಮಾಡಿದ್ರೆ ,ಮೂರು ದಿನ ರೆಸ್ಟ್ ಕೊಡಬಹುದು.ದಿನಕ್ಕೆ 12 ಗಂಟೆ ಕೆಲಸ ಮಾಡಬಹುದು, ಒಟ್ಟು ವಾರದಲ್ಲಿ 48 ಗಂಟೆಗಳು ಕೆಲಸ ಮಾಡಬೇಕು.ಸಾಫ್ಟವೇರ್  ಸೇರಿದಂತೆ ಕೆಲ ಸೆಕ್ಟರ್ ಗಳಿಂದ ಒತ್ತಡವಿದೆ ಎಂದು ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ತವುಡು ಯಾರದ್ದು ಎಂದು ಗೊತ್ತಾಗಿದೆ ಸಿದ್ದುಗೆ ಸಚಿವ ಸುಧಾಕರ್ ಟಾಂಗ್