Select Your Language

Notifications

webdunia
webdunia
webdunia
webdunia

ಹಬ್ಬದ ಸಂಭ್ರಮದ ನಡುವೆ ಹೂ, ಹಣ್ಣು ಬೆಲೆ ಏರಿಕೆ ಬಿಸಿ

ಹಬ್ಬದ ಸಂಭ್ರಮದ ನಡುವೆ ಹೂ, ಹಣ್ಣು ಬೆಲೆ ಏರಿಕೆ ಬಿಸಿ
ಬೆಂಗಳೂರು , ಬುಧವಾರ, 23 ಆಗಸ್ಟ್ 2023 (09:32 IST)
ಬೆಂಗಳೂರು : ಇಂದು ನಾಗರ ಪಂಚಮಿ ಹಬ್ಬದ ಸಂಭ್ರಮದ ನಡುವೆ ಜನತೆಗೆ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳ ದರ ಏರಿಕೆಯಾಗಿದೆ.

ಕಳೆದ ವಾರ 100 ರೂ.ಗೆ ಮಾರಾಟವಾಗುತ್ತಿದ್ದ ಬಾಳೆಹಣ್ಣು ಇಂದು 140-150 ರೂ.ಗೆ ಮಾರಾಟವಾಗುತ್ತಿದೆ. ಜನರು ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದಿದ್ದಾರೆ.

ತೆಂಗಿನಕಾಯಿ ಒಂದಕ್ಕೆ – ದೊಡ್ಡದು 40,
ಸಣ್ಣದು 25-30 ರೂ.
ಅನನಾಸು – ಕಳೆದ ವಾರ 32, ಇಂದು 65 ರೂ.
ನುಗ್ಗೆಕಾಯಿ – ಕಳೆದ ವಾರ 40, ಇಂದು 60ರೂ.
ಬಾಳೆಕಾಯಿ – ಕಳೆದ ವಾರ 8-10 ರೂ. ಈ ವಾರ 15 ರೂ.

ಸಿಹಿ ಕುಂಬಳಕಾಯಿ – ಕಳೆದ ವಾರ ಕೆಜಿಗೆ 20ರೂ. ಈ ವಾರ 40 ರೂ.
ಬಿಳಿ ಕುಂಬಳಕಾಯಿ – 30ರೂ. ಕೆಜಿಗೆ ಇದ್ದಿದ್ದು ಈಗ 40 ರೂ.
ಸೇಬು – ಕಳೆದ ವಾರ 180-200 ರೂ. ಈಗ 250 ರೂ.
ದಾಳಿಂಬೆ – ಕಳೆದ ವಾರ 150 ರೂ., ಈಗ 200 ರೂ.
ಕಪ್ಪು ದ್ರಾಕ್ಷಿ – ಕಳೆದ ವಾರ 100-110 ರೂ., ಈಗ 160 ರೂ. 

ಹಸಿರು ದ್ರಾಕ್ಷಿ – ಕಳೆದ ವಾರ 140 ರಿಂದ 150 ರೂ., ಈಗ 200 ರೂ.
ಸಪೋಟ – ಕಳೆದ ವಾರ 150-160 ರೂ., ಈಗ 200 ರೂ.
ಸೀತಾಫಲ – ಕಳೆದ ವಾರ 60-70 ರೂ. ಇತ್ತು, ಈಗ 100 ರೂ.
ಏಲಕ್ಕಿ ಬಾಳೆಹಣ್ಣು – ಕಳೆದ ವಾರ 80-90ರೂ., ಈಗ 130-140 ರೂ.
ವೀಳ್ಯದೆಲೆ ಕಟ್ಟು – ಕಳೆದ ವಾರ 100-110 ರೂ., ಈಗ 140-160 ರೂ.

Share this Story:

Follow Webdunia kannada

ಮುಂದಿನ ಸುದ್ದಿ

ರೈತರು ಪ್ರತಿಭಟನೆ ಮಾಡಿ ಸರ್ಕಾರದ ಗಮನಕ್ಕೆ ತರ್ತಿದ್ದಾರೆ: ಚಲುವರಾಯಸ್ವಾಮಿ