ಬೆಂಗಳೂರು: ಕಳೆದ ಕೆಲವು ದಿನಗಳಿಂದ ಯಾರದ್ದೇ ಸೋಷಿಯಲ್ ಮೀಡಿಯಾ ಪೇಜ್ ನೋಡಿದರೂ ಘಿಬ್ಲಿ ಸ್ಟೈಲ್ ಅನಿಮೇಟೆಡ್ ಫೋಟೋ ಕಾಣಿಸುತ್ತಿದೆ. ಅಷ್ಟಕ್ಕೂ ಈ ಘಿಬ್ಲಿ ಫೋಟೋ ಎಂದರೇನು? ಇದನ್ನು ಜನರೇಟ್ ಮಾಡುವುದು ಹೇಗೆ ಇಲ್ಲಿದೆ ವಿವರ.
ಸ್ಟುಡಿಯೋ ಘಿಬ್ಲಿ ಒಂದು ಜಪಾನಿನ ಅನಿಮೇಷನ್ ಸ್ಟುಡಿಯೋ ಆಗಿದ್ದು, ಇದರ ಚಲನಚಿತ್ರಗಳು ಎಲ್ಲಾ ಕಾಲದ ಅತ್ಯಂತ ಅಮೂಲ್ಯವಾದ ಅನಿಮೇಟೆಡ್ ಚಲನಚಿತ್ರಗಳಲ್ಲಿ ಒಂದಾಗಿದೆ. ಸ್ಟುಡಿಯೋ ಘಿಬ್ಲಿಯನ್ನು 1985 ರಲ್ಲಿ ಪ್ರಸಿದ್ಧ ನಿರ್ದೇಶಕರಾದ ಹಯಾವೊ ಮಿಯಾಜಾಕಿ, ಇಸಾವೊ ತಕಹತಾ ಮತ್ತು ನಿರ್ಮಾಪಕ ತೋಶಿಯೊ ಸುಜುಕಿ ಸ್ಥಾಪಿಸಿದರು.
ಇದೀಗ ಚ್ಯಾಟ್ ಜಿಪಿಟಿ ಎಐ ಟೂಲ್ ನ ಜನಪ್ರಿಯ ಫೀಚರ್ ಆಗಿ ಸೇರ್ಪಡೆಗೊಂಡಿದೆ. ಇಲ್ಲಿ ಘಿಬ್ಲಿ ಸ್ಟೈಲ್ ಫೋಟೋ ಜನರೇಟ್ ಮಾಡುವ ಆಯ್ಕೆ ನೀಡಿದೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಯಾರದ್ದೇ ಸೋಷಿಯಲ್ ಮೀಡಿಯಾ ಪ್ರೊಫೈಲ್ ನೋಡಿದರೂ ಘಿಬ್ಲಿ ಸ್ಟೈಲ್ ಫೋಟೋ ಕಾಣಿಸುತ್ತಿದೆ.
ಇದು ಏಕಾಏಕಿ ಟ್ರೆಂಡ್ ಆಗಿದ್ದು ಹೇಗೆ? ಫೋಟೋ ಕ್ರಿಯೇಟ್ ಮಾಡುವುದು ಹೇಗೆ?
ಒಂದು ಓಪನ್ ಎಐ ಸಿಇಒ ಸ್ಯಾಮ್ ಆಲ್ಟಾಮನ್ ಎನ್ನುವವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನ ಪ್ರೊಫೈಲ್ ಗೆ ಈ ರೀತಿಯ ತಮ್ಮದೇ ಆನಿಮೇಷನ್ ಫೋಟೋ ಬಳಸಿದರು. ಅದಾದ ಬಳಿಕ ಈಗ ಜಗತ್ತಿನಾದ್ಯಂತ ಘಿಬ್ಲಿ ಫೋಟೋ ವೈರಲ್ ಆಗಿದೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಲವು ಸೆಲೆಬ್ರಿಟಿಗಳ ಫೋಟೋಗಳನ್ನು ಘಿಬ್ಲಿ ಫೋಟೋ ಆಗಿ ಎಡಿಟ್ ಮಾಡಿ ಹಾಕುತ್ತಿದ್ದಾರೆ. ಈ ಫೋಟೋ ಜನರೇಟ್ ಮಾಡಲು ಮೊದಲು ಚ್ಯಾಟ್ ಜಿಪಿಟಿಗೆ ಹೋಗಬೇಕು.
ಇಲ್ಲಿ ನಿಮ್ಮ ಫೋಟೋ ಅಪ್ ಲೋಡ್ ಮಾಡಿ ಇದನ್ನು ಘಿಬ್ಲಿ ಸ್ಟೈಲ್ ಗೆ ಬದಲಾಯಿಸಿ ಎಂದು ಕಮಾಂಡ್ ಕೊಡಬೇಕು. ಫೋಟೋ ಘಿಬ್ಲಿ ಸ್ಟೈಲ್ ನಲ್ಲಿ ಜನರೇಟ್ ಆಗುತ್ತದೆ.