Select Your Language

Notifications

webdunia
webdunia
webdunia
webdunia

ಚೀನಾದ ಡೀಪ್ ಸೀಕ್ ಅಮೆರಿಕಾದ ಚ್ಯಾಟ್ ಜಿಪಿಟಿಗಿಂತ ಉತ್ತಮವೇ: ಬಳಕೆದಾರರು ಏನು ಹೇಳ್ತಿದ್ದಾರೆ ನೋಡಿ

DeepSeek

Krishnaveni K

ಬೆಂಗಳೂರು , ಬುಧವಾರ, 29 ಜನವರಿ 2025 (09:32 IST)
Photo Credit: X
ಬೆಂಗಳೂರು: ಅಮೆರಿಕಾದ ಚ್ಯಾಟ್ ಜಿಪಿಟಿ ತಂತ್ರಜ್ಞಾನಕ್ಕೆ ಸೆಡ್ಡು ಹೊಡೆಯಲು ಚೀನಾ ಡೀಪ್ ಸೀಕ್ ಎಂಬ ಎಐ ತಂತ್ರಜ್ಞಾನವನ್ನು ಹೊರಬಿಟ್ಟಿತ್ತು. ಆದರೆ ಡೀಪ್ ಸೀಕ್ ತಂತ್ರಜ್ಞಾನ ಚ್ಯಾಟ್ ಜಿಪಿಟಿಗಿಂತ ಉತ್ತಮವೇ? ಬಳಕೆದಾರರು ಏನು ಹೇಳ್ತಿದ್ದಾರೆ ನೋಡಿ.

ಅಮೆರಿಕಾದ ಚ್ಯಾಟ್ ಜಿಪಿಟಿ ತಂತ್ರಜ್ಞಾನ ಸಾಕಷ್ಟು ಸಮಯ ತೆಗೆದುಕೊಂಡು ಅಭಿವೃದ್ಧಿ ಪಡಿಸಲಾದ ಎಐ ತಂತ್ರಜ್ಞಾನವಾಗಿದೆ. ಮೊದಲು ಇದನ್ನು ಉಚಿತವಾಗಿಯೇ ನೀಡಲಾಗಿತ್ತು. ಆದರೆ ಈಗ ಇದರ ಬಳಕೆಗೆ ಪಾವತಿ ಮಾಡಬೇಕಿದೆ. ಹೀಗಾಗಿ ಚೀನಾ ಅಭಿವೃದ್ಧಿಪಡಿಸಿದ ಉಚಿತ ಎಐ ತಂತ್ರಜ್ಞಾನ ಡೀಪ್ ಸೀಕ್ ಈಗ ಕೆಲವೇ ದಿನಗಳಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಜನವರಿ 10 ರಂದು ಚೀನಾ ಡೀಪ್ ಸೀಕ್ ಬಿಡುಗಡೆ ಮಾಡಿತ್ತು. ಇದೀಗ ಅದು ವಿಶ್ವದಾದ್ಯಂತ ಜನಪ್ರಿಯವಾಗಿದೆ. ಚ್ಯಾಟ್ ಜಿಪಿಟಿಯನ್ನೂ ಮೀರಿ ಇದನ್ನು ಡೌನ್ ಲೋಡ್ ಮಾಡಲಾಗಿದೆ.

ಬಳಕೆದಾರರ ಅಭಿಪ್ರಾಯಗಳೇನು?
ಚ್ಯಾಟ್ ಜಿಪಿಟಿಗೆ ಹೋಲಿಸಿದರೆ ಡೀಪ್ ಸೀಕ್ ಅಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದು ಬಹುತೇಕ ಭಾರತೀಯ ಬಳಕೆದಾರರ ಅಭಿಪ್ರಾಯವಾಗಿದೆ. ಡೀಪ್ ಸೀಕ್ ನಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಸಿಗುತ್ತಿಲ್ಲ ಎಂಬ ಅಪವಾದಗಳಿವೆ. ಸೋಷಿಯಲ್ ಮೀಡಿಯಾದಲ್ಲಿ ಡೀಪ್ ಸೀಕ್ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ಕೇಳಿಬರುತ್ತಿದ್ದು, ಇದು ಚೀನಾದ ಆಪ್ ಆಗಿರುವುದರಿಂದ ನಂಬಲರ್ಹವಲ್ಲ ಎನ್ನುವವರೂ ಇದ್ದಾರೆ. ಕೆಲವೊಂದು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವೇ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಉದಾಹರಣೆಗೆ ಅರುಣಾಚಲಪ್ರದೇಶದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಡೀಪ್ ಸೀಕ್ ನಿರಾಕರಿಸಿದೆ. ಇಂತಹ ಹಲವು ಡ್ರಾಬ್ಯಾಕ್ ಗಳು ಈ ಎಐ ತಂತ್ರಜ್ಞಾನದಲ್ಲಿದೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Kumbhmela Stampede: ಮಹಾಕುಂಭಮೇಳದಲ್ಲಿ ಮಹಾ ದುರಂತ: ಕಾಲ್ತುಳಿತದಲ್ಲಿ ಹಲವರಿಗೆ ಗಾಯ