ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಸರ್ಕಾರ ಒಂದೊಂದೇ ವಸ್ತುಗಳ ಬೆಲೆ ಏರಿಕೆ ಮಾಡಿ ಶಾಕ್ ಕೊಡುತ್ತಿದೆ. ಇದೀಗ ಮತ್ತೊಂದು ಬೆಲೆ ಏರಿಕೆಗೆ ಜನ ಸಿದ್ಧರಾಗಬೇಕಿದೆ.
ಕಳೆದ ವಾರವಷ್ಟೇ ರಾಜ್ಯ ಸರ್ಕಾರ ಹಾಲಿನ ಬೆಲೆ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಪ್ರತೀ ಲೀಟರ್ ನಂದಿನಿ ಹಾಲಿನ ಬೆಲೆ 4 ರೂ.ಗಳಷ್ಟು ಹೆಚ್ಚಾಗಿತ್ತು. ಇದೀಗ ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆಗೆ ಜನತೆ ಸಿದ್ಧವಾಗಬೇಕಿದೆ.
ಹೋಟೆಲ್ ಗಳೂ ಈಗ ಕಾಫಿ, ಟೀ, ತಿಂಡಿಗಳ ಬೆಲೆ ಏರಿಕೆಗೆ ಮುಂದಾಗಿದ್ದಾರೆ. ಹಾಲು ಬೆಲೆ ಏರಿಕೆಯಾದ ಬೆನ್ನಲ್ಲೇ ಹೋಟೆಲ್ ಗಳೂ ಈಗ ಕಾಫಿ, ಟೀ ಬೆಲೆ ಏರಿಕೆಗೆ ಮುಂದಾಗಿದ್ದಾರೆ. ಹಾಲು ದರ ಏರಿಕೆಯಾಗಿರುವುದರಿಂದ ಟೀ, ಕಾಫಿಗೆ ಮೊದಲಿನ ಬೆಲೆಯೇ ಇದ್ದರೆ ನಷ್ಟವಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಇದರ ಜೊತೆಗೆ ತಿಂಡಿ, ಊಟದ ಬೆಲೆಯೂ ಹೆಚ್ಚಳ ಮಾಡಲು ಹೊರಟಿದ್ದಾರೆ. ಸದ್ಯದಲ್ಲೇ ಹೋಟೆಲ್ ಮಾಲಿಕರ ಸಂಘ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಎಲ್ಲವೂ ಸರಿ ಹೋದರೆ ಈ ತಿಂಗಳೇ ಕಾಫಿ, ಟೀ, ತಿಂಡಿ ರೇಟ್ ದುಬಾರಿಯಾಗಲಿದೆ.